Thursday, June 4, 2026
Homeಕರಾವಳಿಪುತ್ತೂರು: ಹೆರಿಗೆ ವೇಳೆ ತೀವ್ರ ರಕ್ತಸ್ರಾವವಾಗಿ ಆಶಾ ಕಾರ್ಯಕರ್ತೆ ಸಾವು

ಪುತ್ತೂರು: ಹೆರಿಗೆ ವೇಳೆ ತೀವ್ರ ರಕ್ತಸ್ರಾವವಾಗಿ ಆಶಾ ಕಾರ್ಯಕರ್ತೆ ಸಾವು

- Advertisement -
- Advertisement -

ಪುತ್ತೂರು: ಹೆರಿಗೆ ವೇಳೆ ತೀವ್ರ ರಕ್ತಸ್ರಾವವಾಗಿ ಆಶಾ ಕಾರ್ಯಕರ್ತೆ ಸಾವನ್ನಪ್ಪಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಆಶಾ ಕಾರ್ಯಕರ್ತೆ ಭವ್ಯ (29) ಮೃತ ದುರ್ದೈವಿ. ಬೆಳ್ತಂಗಡಿಯ ಕರಾಯದ  ಭವ್ಯ ಅವರನ್ನು ಹೆರಿಗೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಹೆರಿಗೆ ಬಳಿಕ ಅವರಿಗೆ ತೀವ್ರ ರಕ್ತಸ್ರಾವವಾಗಿದೆ.

ತಕ್ಷಣ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ದಾರಿ ಮಧ್ಯೆ ಅವರು ಸಾವನ್ನಪ್ಪಿದ್ದಾರೆ.ಭವ್ಯರವರದ್ದು 3ನೇ ಹೆರಿಗೆಯಾಗಿದ್ದು, ಮಗು ಆರೋಗ್ಯವಾಗಿರುವುದಾಗಿ ಎನ್ನಲಾಗಿದೆ.

ಮೃತರು ಪತಿ ಬಾಲಕೃಷ್ಣ ಗೌಡ, ನವಜಾತ ಶಿಶು, 4ನೇ ತರಗತಿ ಹಾಗೂ 3ನೇ ತರಗತಿಯ ಇಬ್ಬರು ಗಂಡು ಮಕ್ಕನ್ನು ಅಗಲಿದ್ದಾರೆ.

- Advertisement -

Latest News

error: Content is protected !!