Saturday, June 13, 2026
Homeಕರಾವಳಿವಕೀಲ ಕುಲದೀಪ್ ಶೆಟ್ಟಿ ಮೇಲೆ ಹಲ್ಲೆ ಆರೋಪ : ಪುಂಜಾಲಕಟ್ಟೆ ಠಾಣೆಯ ಎಸ್.ಐ ಸುತೇಶ್ ಎಸ್.ಪಿ....

ವಕೀಲ ಕುಲದೀಪ್ ಶೆಟ್ಟಿ ಮೇಲೆ ಹಲ್ಲೆ ಆರೋಪ : ಪುಂಜಾಲಕಟ್ಟೆ ಠಾಣೆಯ ಎಸ್.ಐ ಸುತೇಶ್ ಎಸ್.ಪಿ. ಕಚೇರಿಗೆ ವರ್ಗಾವಣೆ

- Advertisement -
- Advertisement -

ಬೆಳ್ತಂಗಡಿ : ಯುವ ವಕೀಲರಾದ ಕುಲದೀಪ್ ಶೆಟ್ಟಿ ರವರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಎದುರಿಸುತ್ತಿರುವ ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಸಬ್ ಇಸ್ಪೆಕ್ಟರ್ ಸುತೇಶ್ ರವರನ್ನು ಎಸ್.ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಸಬ್ ಇಸ್ಪೆಕ್ಟರ್ ಸುತೇಶ್ ರವರು ಮತ್ತು ಸಿಬ್ಬಂದಿ ಜಾಗದ ವಿಚಾರವೊಂದರ ಪ್ರಕರಣದಲ್ಲಿ ವಕೀಲರಾದ ಕುಲದೀಪ್ ಶೆಟ್ಟಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿತ್ತು. ಈ ಬಗ್ಗೆ ಅವರ ಮೇಲೆ ಕ್ರಮಕೈಗೊಳ್ಳುವಂತೆ ವಕೀಲರ ಸಂಘದಿಂದ ಪ್ರತಿಭಟನೆ ಕೂಡ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ.

ಪ್ರಕರಣದ ಬಗ್ಗೆ ಎಸ್ಪಿ ನೇತೃತ್ವದಲ್ಲಿ ಪುತ್ತೂರು ಡಿವೈಎಸ್ಪಿ ಆಂತರಿಕ ತನಿಖೆ ಮಾಡಿದ್ದರು. ಇದರ ವರದಿ ಬೆನ್ನಲ್ಲೆ ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಸಬ್ ಇನ್ಸೆಕ್ಟರ್ ಸುತೇಶ್ ರನ್ನು ನೇರವಾಗಿ ಎಸ್.ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಇನ್ನೂ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿಎಸ್ಐ ಅಗಿ ಯಾರನ್ನು ನೇಮಕ ಮಾಡಿಲ್ಲ. ಅದಕ್ಕಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯ ಪಿಎಸ್ಐ ನಂದಕುಮಾರ್ ಅವರಿಗೆ ತಾತ್ಕಾಲಿಕವಾಗಿ ಜಾರ್ಜ್ ನೀಡಲಾಗಿದೆ.

- Advertisement -

Latest News

error: Content is protected !!