Saturday, June 6, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಪೋಕ್ಸೋ ಪ್ರಕರಣದ ಆರೋಪಿಗೆ ಶಿಕ್ಷೆ ಪ್ರಮಾಣ ಪ್ರಕಟ

ಬೆಳ್ತಂಗಡಿ : ಪೋಕ್ಸೋ ಪ್ರಕರಣದ ಆರೋಪಿಗೆ ಶಿಕ್ಷೆ ಪ್ರಮಾಣ ಪ್ರಕಟ

- Advertisement -
- Advertisement -

ಬೆಳ್ತಂಗಡಿ : ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪೋಕ್ಸೋ ಪ್ರಕರಣದ ಆರೋಪಿ ಬಂಟ್ವಾಳ ಸಜಿಪನಡು ನಿವಾಸಿ ಜುಮಾ‌ರ್ ಎಂಬಾತನಿಗೆ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 1 ವರ್ಷ ಕಾರಾಗೃಹ ಹಾಗೂ 10 ಸಾವಿರ ರೂ.ದಂಡ ವಿಧಿಸಿ . ಫೆ.11 ರಂದು ಆದೇಶ ನೀಡಿದೆ.

ಪ್ರಕರಣ ವಿವರ: ಅಪ್ರಾಪ್ತ ವಯಸ್ಸಿನ ಬಾಲಕಿ ತನ್ನ ನೆರೆಯ ಸಂಬಂಧಿಯೊಂದಿಗೆ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಗೋಳಿಯಂಗಡಿಯ ಐ.ಟಿ.ಐಗೆ ಹೋಗುತ್ತಿರುವ ಸಮಯ ಆರೋಪಿತ ದಿನಾಲೂ ಹಿಂಬಾಲಿಸಿಕೊಂಡು ಬರುತ್ತಿದದ್ದು ಅಲ್ಲದೆ, ಬೈಕ್ ನಿಲ್ಲಿಸಿ ಬೈಕ್ ನಲ್ಲಿ ಬರುತ್ತೀರಾ, ನಿಮ್ಮ ಪೋನ್ ನಂಬರ್ ಕೊಡಿ ಎಂದು ಕೇಳುತ್ತಿದ್ದು 2024 ಅ. 15 ರಂದು ಬೆಳಿಗ್ಗೆ ಸುಮಾರು 7.45 ಗಂಟೆಗೆ ಎಂದಿನಂತೆ ಅಪ್ರಾಪ್ತ ವಯಸ್ಸಿನ ಬಾಲಕಿ ತನ್ನ ಸಂಬಂಧಿಯೊಂದಿಗೆ ಐಟಿಐಗೆ ನಡೆದುಕೊಂಡು ಹೋಗುವಾಗ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಪುಲ್ಲಾಯಿ ಎಂಬಲ್ಲಿ ಆರೋಪಿ ಜುಮಾ‌ರ್, ಆತನ ಬೈಕನ್ನು ಚಲಾಯಿಸಿಕೊಂಡು ಮುಂದಕ್ಕೆ ಹೋಗಿ ವಾಪಾಸು ಹಿಂದಕ್ಕೆ ತಿರುಗಿಸಿಕೊಂಡು ಬಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದು,ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಅ.ಕ್ರ: 77/2024 ಕಲಂ: 78 BNS-2023 ಮತ್ತು:ಕಲಂ;12 ಪೋಕೋ ಕಾಯಿದೆ- 2012 ರಂತೆ ಪ್ರಕರಣ ದಾಖಲಾಗಿತ್ತು.

- Advertisement -

Latest News

error: Content is protected !!