- Advertisement -
- Advertisement -
ಮಂಗಳೂರು: ಮೂಲ್ಕಿ ತಾಲೂಕಿನ ಹರಿಪಾದೆಯ ಜಾರಂದಾಯ ದೈವದ ನೇಮದಲ್ಲಿ ತಮಿಳು ಚಲನಚಿತ್ರ ನಟ ವಿಶಾಲ್ ಭಾಗಿಯಾಗಿದ್ದರು.
ಇತ್ತೀಚೆಗೆ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದ ಕಾಲಿವುಡ್ ನಟ ವಿಶಾಲ್, ತನ್ನ ಆರೋಗ್ಯ ಸಮಸ್ಯೆ ಕುರಿತು ದೈವದ ಬಳಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹರಿಪಾದೆಯ ಧರ್ಮದೈವ ಜಾರಂದಾಯ ದೈವಸ್ಥಾನದಲ್ಲಿ ನೇಮದ ವೇಳೆ ವಿಶಾಲ್ ದೈವಕ್ಕೆ ಮಲ್ಲಿಗೆ ಹೂವು ಸಮರ್ಪಿಸಿದ್ದು, ಶೀಘ್ರದಲ್ಲೇ ಸಮಸ್ಯೆ ನಿವಾರಿಸುವ ಅಭಯವನ್ನು ದೈವ ನೀಡಿದೆ ಎಂದು ಹೇಳಲಾಗಿದೆ.
ಆರೋಗ್ಯ ಸಮಸ್ಯೆಯಿಂದ ಸಂಪೂರ್ಣ ಗುಣಮುಖವಾಗಿ ಬಂದು ತುಲಾಭಾರ ಸೇವೆ ನೀಡಲು ನಟ ವಿಶಾಲ್ ಗೆ ದೈವಸ್ಥಾನದಲ್ಲಿ ಸಲಹೆ ಸಿಕ್ಕಿದೆ ಎನ್ನಲಾಗಿದೆ.
- Advertisement -