Sunday, June 7, 2026
Homeತಾಜಾ ಸುದ್ದಿಮಂಗಳೂರು: ಕರ್ನಾಟಕ ರತ್ನ ಪ್ರಶಸ್ತಿ ಪಡೆಯಲು ಪುನೀತ್​ ಅರ್ಹ ವ್ಯಕ್ತಿ: ಡಾ.ವೀರೇಂದ್ರ ಹೆಗ್ಗಡೆ

ಮಂಗಳೂರು: ಕರ್ನಾಟಕ ರತ್ನ ಪ್ರಶಸ್ತಿ ಪಡೆಯಲು ಪುನೀತ್​ ಅರ್ಹ ವ್ಯಕ್ತಿ: ಡಾ.ವೀರೇಂದ್ರ ಹೆಗ್ಗಡೆ

- Advertisement -
- Advertisement -

ಮಂಗಳೂರು: ಪುನೀತ್​ಗೆ ಕರ್ನಾಟಕ ರತ್ನ ಗೌರವ ದೊರೆತಿದ್ದು ಸಂತಸದ ವಿಚಾರ. ಅವರ ಸಾವನ್ನು ಇನ್ನೂ ನಮಗೆ ಅರಗಿಸಿಕೊಳ್ಳಲಾಗ್ತಿಲ್ಲ.ಇಂದು ನಾವೆಲ್ಲರೂ ಪುನೀತ್‌ರನ್ನು ಸ್ಮರಿಸಬೇಕು ಎಂದು ಮಂಗಳೂರಿನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಪುನೀತ್‌ ರಾಜ್‌ ಕುಮಾರ್‌ ತಮ್ಮ ಸಾಧನೆ ಹಾಗೂ ಸರಳತೆಯ ಮೂಲಕವೇ ಜನಮನಗೆದ್ದಿದ್ದಾರೆ. ಪುನೀತ್​ ತಂದೆ ರಾಜ್​​​ಕುಮಾರ್ ಅವರ​ ನನಗೆ ಅತ್ಯಂತ ಪ್ರೀತಿಯವರು ಮತ್ತು ಕ್ಷೇತ್ರದ ಬಗ್ಗೆ ಅಪಾರ ಗೌರವವಿತ್ತು. ಕರ್ನಾಟಕ ರತ್ನ ಪ್ರಶಸ್ತಿ ಪಡೆಯಲು ಪುನೀತ್​ ಅರ್ಹ ವ್ಯಕ್ತಿ ಎಂದು ಹೇಳಿದರು. ಭಗವಂತನ ಪಾದ ಸೇರಿದ ಪುನೀತ್​​ನನ್ನು ಇವತ್ತು ಸ್ಮರಿಸುತ್ತೇನೆ ಎಂದು ಸ್ಮರಿಸಿದರು. ಪುನೀತ್ ರ ಪುಣ್ಯದಿಂದ ಮತ್ತಷ್ಟು ಉತ್ತಮ ಕಲಾವಿದರು ‌ಮೂಡಿ ಬರಲಿ ಅಂತ ಹಾರೈಸುತ್ತೇನೆ ಎಂದರು.

- Advertisement -

Latest News

error: Content is protected !!