Friday, June 5, 2026
Homeತಾಜಾ ಸುದ್ದಿಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ; ಅಪ್ಪುವಿನ ಸಮಾಧಿ ಬಳಿ ಹರಿದು ಬರುತ್ತಿದೆ...

ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ; ಅಪ್ಪುವಿನ ಸಮಾಧಿ ಬಳಿ ಹರಿದು ಬರುತ್ತಿದೆ ಅಭಿಮಾನಿಗಳ ಸಾಗರ

- Advertisement -
- Advertisement -

ಬೆಂಗಳೂರು : ಪವರ್ ಸ್ಟಾರ್ ಅಗಲಿ ವರ್ಷ ಉರುಳಿದ್ರೂ ಇನ್ನೂ ಅವರ ಅಭಿಮಾನಿಗಳು ಅವರ ನೆನಪಿನಲ್ಲೇ ದಿನ ದೂಡುತ್ತಿದ್ದಾರೆ.ಇಂದು ಅಪ್ಪು ಅವರ 48ನೇ ಹುಟ್ಟುಹಬ್ಬ. ಅಪ್ಪು ಅವರ ಅಗಲಿಕೆಯ ನೋವಿನಲ್ಲೇ ಅವರ ಅಭಿಮಾನಿಗಳು ಪವರ್ ಸ್ಟಾರ್ ಬರ್ತಡೇ ಆಚರಿಸುತ್ತಿದ್ದಾರೆ.

ಅಪ್ಪು ಅವರ ಸಮಾಧಿ ಬಳಿ ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ಇನ್ನು ನಿನ್ನೆ ಮಧ್ಯರಾತ್ರಿಯೇ ಪುನೀತ್ ಸಮಾಧಿ ಬಳಿ ಬಂದ ನಟ ಯುವ ರಾಜ್ ಕುಮಾರ್ ಚಿಕ್ಕಪ್ಪನಿಗಾಗಿ ಬರ್ತಡೇ ಕೇಕ್ ತಂದಿದ್ದರು. ಇನ್ನು ಬೆಳ್ಳಗೆಯೇ ಅಪ್ಪು ಕುಟುಂಬಸ್ಥರು ಸಮಾಧಿ ಬಳಿ ಬಂದು ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಅಭಿಮಾನಿಯೊಬ್ಬರು ಅಪ್ಪು ಪ್ರತಿಮೆ ಮಾಡಿ ಸಮಾಧಿ ಬಳಿ ಇರಿಸಿದ್ದು ಗಮನ ಸೆಳೆಯುತ್ತಿದೆ. ಇನ್ನು ರಾಜ್ಯದೆಲ್ಲೆಡೆ ಅವರ ಅಭಿಮಾನಿಗಳು ಅಪ್ಪು ಉತ್ಸವ ಹೆಸರಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.

- Advertisement -

Latest News

error: Content is protected !!