Friday, May 17, 2024
Homeಕರಾವಳಿಉಡುಪಿಉಡುಪಿ: ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ

ಉಡುಪಿ: ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ

spot_img
- Advertisement -
- Advertisement -

ಉಡುಪಿ: ಜಿಲ್ಲೆಯಲ್ಲಿ ಫೆ.27 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಉಡುಪಿ ನಡೆಯಲಿದೆ. ಸುಮಾರು 73000 ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.


 ಮುಂಜಾನೆ 8 ಗಂಟೆಗೆ ಉಡುಪಿಯ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಜಿಲ್ಲೆಯಲ್ಲಿನ ಐದು ವರ್ಷದ ಒಳಗಿನ ಗ್ರಾಮೀಣ ಭಾಗದ 61,105 ಹಾಗೂ ನಗರ ಪ್ರದೇಶದ 12, 890 ಮಕ್ಕಳು ಹೇಳಿಕೆ ಪಡೆಯಲು ಅರ್ಹರಿದ್ದಾರೆ. 662 ಲಸಿಕೆ ಕೇಂದ್ರಗಳನ್ನು ತೆರೆಯಲಾಗುವುದು.
6 ಮೊಬೈಲ್ ಟೀಮ್ ಮತ್ತು ಬಸ್, ರೈಲು ನಿಲ್ದಾಣ ಸೇರಿದಂತೆ ಜನ ನಿಬಿಡ ಪ್ರದೇಶದಲ್ಲಿ 36 ಟ್ರಾನ್ಸಿಟ್ ಬೂತ್, ಟೋಲ್ಗೇಟ್ ಪ್ರದೇಶದಲ್ಲಿ ಲಸಿಕೆ ಕೇಂದ್ರ ತೆರೆಯಲಿದ್ದೇವೆ. ಅಲ್ಲದೆ ಫೆ. 28ರಿಂದ ಮಾ 2ರ ವರೆಗೆ ಸ್ವಯಂ ಸೇವಕರು ವಿವಿಧ ಭಾಗಗಳಲ್ಲಿ ಮನೆ ಮನೆಗೆ ಭೀಟಿ ನೀಡಿ ಅರ್ಹ ಮಕ್ಕಳಿಗೆ ಲಸಿಕೆ ಹಾಕಿಸಿರುವ ಬಗ್ಗೆ ಖಚಿತಪಡಿಸಲಿದ್ದಾರೆ ಎಂದು ಹೇಳಿದರು.

- Advertisement -
spot_img

Latest News

error: Content is protected !!