Thursday, June 4, 2026
Homeಕರಾವಳಿಉಪ್ಪಳ: ಸರಕಾರಿ ಕಾಲೇಜಿನಲ್ಲಿ ರ್ಯಾಗಿಂಗ್ ಮಾಡಿ ಕೂದಲು ಕತ್ತರಿಸಿದ ಘಟನೆ ಬೆಳಕಿಗೆ !

ಉಪ್ಪಳ: ಸರಕಾರಿ ಕಾಲೇಜಿನಲ್ಲಿ ರ್ಯಾಗಿಂಗ್ ಮಾಡಿ ಕೂದಲು ಕತ್ತರಿಸಿದ ಘಟನೆ ಬೆಳಕಿಗೆ !

- Advertisement -
- Advertisement -

ಉಪ್ಪಳ: ಕೆಲವೊಂದು ಬಾರಿ ಮಕ್ಕಳು ಶಾಲೆಗೆ ವಿಧ್ಯೆ ಕಲಿಯಲು ಹೋಗುತ್ತಾರೋ ಅಥವಾ ಸುಮ್ಮನೆ ಬೇಡದ ಬುದ್ದಿ, ಇತರ ಹುಚ್ಚಾಟಗಳನ್ನೂ ಮಾಡಲೆಂದೇ ಹೋಗುತ್ತಾರೋ ಎಂದು ಅನಿಸುತ್ತದೆ.

ಯಾಕೆಂದರೆ ಸರಕಾರಿ ಕಾಲೇಜು ಒಂದರಲ್ಲಿ ಮಕ್ಕಳ ಹುಚ್ಚಟದ ಘಟನೆ ನಡೆದಿದೆ. ಉಪ್ಪಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಯ ಕೂದಲು ಕತ್ತರಿಸಿ ರ್ಯಾಗಿಂಗ್ ಮಾಡಿದ ಘಟನೆ ಇಂದು ಬೆಳಕಿಗೆ ಬಂದಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ವಿದ್ಯಾರ್ಥಿಯ ಕೂದಲು ಕತ್ತರಿಸುವ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ರ್ಯಾಗಿಂಗ್ ಗೆ ಒಳಗಾದ ವಿದ್ಯಾರ್ಥಿ ದೂರು ನೀಡಿಲ್ಲ. ಇದರಿಂದ ಘಟನೆ ಬೆಳಕಿಗೆ ಬರಲು ತಡವಾಗಿದೆ.

ವಿದ್ಯಾರ್ಥಿ ಈ ಕುರಿತು ಯಾವುದೇ ದೂರು ನೀಡಿಲ್ಲ ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಮಂಜೇಶ್ವರ ಪೊಲೀಸರು ಶಾಲೆಗೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

- Advertisement -

Latest News

error: Content is protected !!