Wednesday, May 8, 2024
Homeಉದ್ಯಮಆಗಸ್ಟ್ 14 ರವರೆಗೂ ಓಪನ್ ಆಗಲ್ಲ ಪಬ್!

ಆಗಸ್ಟ್ 14 ರವರೆಗೂ ಓಪನ್ ಆಗಲ್ಲ ಪಬ್!

spot_img
- Advertisement -
- Advertisement -

ಬೆಂಗಳೂರು: ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾ ಥಿಯೇಟರ್ ಗಳು ಹಾಗೂ ಪಬ್ ಗಳು ಆಗಸ್ಟ್ 14 ರವರೆಗೂ ಹಾಲಿ ನಿಯಮಗಳ ಪ್ರಕಾರವೇ ಮುಂದುವರಿಯಲಿವೆ. ಇಂದು ಥಿಯೇಟರ್ ಗಳು ಮತ್ತು ಪಬ್ ಗಳಿಗೆ ಈಗಿರುವ ನಿಯಮಗಳನ್ನೇ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಕೋವಿಡ್ ಸೋಂಕು‌ ಜಾಸ್ತಿ ಇರುವ ಜಿಲ್ಲೆಗಳ ಜಿಲ್ಲಾಡಳಿತಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಈ ವಿಚಾರ ಸ್ಪಷ್ಟಪಡಿಸಿದ್ದು, ಈಗಿರುವ ನಿಯಮವೇ ಮುಂದಿನ ಆಗಸ್ಟ್ 14 ರವರೆಗೂ ಮುಂದುವರೆಯಲಿದೆ ಎಂದು ಹೇಳಿದ್ದಾರೆ.‌

ಸದ್ಯ ಚಿತ್ರಮಂದಿರಗಳಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇಕಡಾ ಐವತ್ತರಷ್ಟು ಭರ್ತಿಗೆ ಮಾತ್ರ ಅವಕಾಶ ಕೊಡಲಾಗಿದ್ದರೆ, ಪಬ್ ಗಳನ್ನು ಇನ್ನೂ ತೆರೆಯಲು ರಾಜ್ಯ ಸರ್ಕಾರ ಅವಕಾಶ ನೀಡಿಲ್ಲ.

ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಆಸನ ಭರ್ತಿಗೆ ಅವಕಾಶ ನೀಡುವಂತೆ ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

- Advertisement -
spot_img

Latest News

error: Content is protected !!