Thursday, April 18, 2024
HomeಅಪರಾಧPSI ನೇಮಕಾತಿ ಅಕ್ರಮ ಪ್ರಕರಣ: ದಿವ್ಯಾ ಹಾಗರಗಿ ಪತಿ ಅರೆಸ್ಟ್ , ತನಿಖೆ ಇನ್ನಷ್ಟು ಚುರುಕು

PSI ನೇಮಕಾತಿ ಅಕ್ರಮ ಪ್ರಕರಣ: ದಿವ್ಯಾ ಹಾಗರಗಿ ಪತಿ ಅರೆಸ್ಟ್ , ತನಿಖೆ ಇನ್ನಷ್ಟು ಚುರುಕು

spot_img
- Advertisement -
- Advertisement -

ಕಲ್ಬುರ್ಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯ ಬಿಜೆಪಿ ನಾಯಕಿ ದಿವ್ಯ ಹಾಗರಗಿ ಅವರ ಪತಿ ರಾಜೇಶ ಖರ್ಗೆಯವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 8ಕ್ಕೆ ಏರಿಕೆ ಆಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಮೊದಲು ವೀರೇಶ ಎನ್ನುವ ಸೇಡಂನ ಯುವಕನನ್ನು ಬಂಧಿಸಿದ್ದಾರೆ. ಈತ ಕೇವಲ 20 ಪ್ರಶ್ನೆಗಳಿಗಷ್ಟೇ ಉತ್ತರಿಸಿ PSI ನೇಮಕಾತಿಯಲ್ಲಿ ಸೆಲೆಕ್ಟ್ ಆಗಿದ್ದ. ಇದಾದ ನಂತರ ಕಳೆದ ಏಪ್ರಿಲ್ 16 ರಂದು ಜ್ಞಾನ ಜ್ಯೋತಿ ಶಾಲೆಯ ಮೂವರು ಪರೀಕ್ಷಾ ಮೇಲ್ವಿಚಾರಕರು, ಮೂವರು ಅಭ್ಯರ್ಥಿಗಳನ್ನು ಬಂಧಿಸಿದ್ದರು. ಅಲ್ಲದೇ ನಿನ್ನೆ ದಿವ್ಯಾ ಹಾಗರಗಿ ಅವರ ಪತಿ ರಾಜೇಶ ಹಾಗರಗಿ ಅವರನ್ನು ಸಿಐಡಿ ಬಂಧಿಸಿದೆ.

ಪಿಎಸೈ ನೇಮಕಾತಿ ಅಕ್ರಮ ನಡೆದ ಕಲಬುರಗಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಇನ್ನೂ ಪತ್ತೆಯಾಗಿಲ್ಲ. ಕಳೆದ ನಾಲ್ಕೈದು ದಿನಗಳಿಂದ ನಾಪತ್ತೆಯಾಗಿರುವ ಹಾಗರಗಿ ಸಿಐಡಿ ಅಧಿಕಾರಿಗಳ ಕೈಗೆ ಸಿಗದೇ ತಲೆ ಮರೆಸಿಕೊಂಡಿದ್ದಾರೆ.

ಈವರೆಗೆ ಬಂಧಿತರಾಗಿರುವ ಆರೋಪಿಗಳ ಪೈಕಿ ಅಭ್ಯರ್ಥಿಗಳು ಮತ್ತು ಮೇಲ್ವಿಚಾರಕರು ಸೇರಿ ಏಳು ಆರೋಪಿಗಳನ್ನು ಸಿಐಡಿ ಮರಳಿ ತನ್ನ ವಶಕ್ಕೆ ಪಡೆದಿದೆ. ಹೆಚ್ಚಿನ ವಿಚಾರಣೆಗಾಗಿ ಇವರನ್ನು ತಮ್ಮ ವಶಕ್ಕೆ ನೀಡುವಂತೆ, ಸಿಐಡಿ ಕಲ್ಬುರ್ಗಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು. ನ್ಯಾಯಾಲಯ ಮೂರು ದಿನಗಳ ಕಾಲ ಆರೋಪಿಗಳನ್ನು ಸಿಐಡಿ ವಶಕ್ಕೆ ನೀಡಿದೆ. ನ್ಯಾಯಾಂಗ ವಶದಲ್ಲಿದ್ದ ಅವರನ್ನು ತನ್ನ ವಶಕ್ಕೆ ಪಡೆದ ಕೂಡಲೇ ಸಿಐಡಿ ಅಧಿಕಾರಿಗಳು, ಅಕ್ರಮ ನಡೆದ ಶಾಲೆಗೆ ಇವರನ್ನು ಕರೆದುಕೊಂಡು ಹೋಗಿ ಮಾಹಿತಿ ಪಡೆದರು. ಅಕ್ರಮ ನಡೆದಿದ್ದು ಹೇಗೆ ? ಯಾವ್ಯಾವ ಕೋಣೆಯಲ್ಲಿ ಪರೀಕ್ಷೆ ಬರೆದಿದ್ದಿರಿ ?  ಸಿಸಿ ಕ್ಯಾಮೆರಾ ಕಣ್ ತಪ್ಪಿಸಲು ನೀವು ಮಾಡಿರುವ ಪ್ಲಾನ್ ಏನು ? ಎಲ್ಲಾ ಮಾಹಿತಿಯನ್ನು ಪಡೆದುಕೊಂಡರು. ಅಲ್ಲದೆ ಸಿಸಿ ಕ್ಯಾಮೆರಾ ಡಿವಿಆರ್ ಅನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು. ಒಟ್ಟಾರೆ ಈ ಪ್ರಕರಣದ ಜನ್ಮಜಾಲಾಡುತ್ತಿರುವ ಅಧಿಕಾರಿಗಳು, ತನಿಖೆ ಚುರುಕುಗೊಳಿಸಿದ್ದು, ಸದ್ಯದಲ್ಲೇ ಇನ್ನಷ್ಟು ಆರೋಪಿಗಳು ಬಂಧನಕ್ಕೊಳಗಾಗುವ ಸಾಧ್ಯತೆಯಿದೆ. ಈ ನಡುವೆ ತಲೆಮರೆಸಿಕೊಂಡವರ ಪತ್ತೆಗೆ ಸಿಐಡಿ ಜಾಲ ಬೀಸಿದೆ.

- Advertisement -
spot_img

Latest News

error: Content is protected !!