Saturday, June 6, 2026
Homeಕರಾವಳಿಉಳ್ಳಾಲ: ಕೊಂಡಾಣ ದೈವಸ್ಥಾನದ ನಿರ್ಮಾಣ ಹಂತದ ಭಂಡಾರ ಮನೆ ಧ್ವಂಸ ಪ್ರಕರಣ; ಕೋಟೆಕಾರು ಪಟ್ಟಣ ಪಂಚಾಯತ್...

ಉಳ್ಳಾಲ: ಕೊಂಡಾಣ ದೈವಸ್ಥಾನದ ನಿರ್ಮಾಣ ಹಂತದ ಭಂಡಾರ ಮನೆ ಧ್ವಂಸ ಪ್ರಕರಣ; ಕೋಟೆಕಾರು ಪಟ್ಟಣ ಪಂಚಾಯತ್ ಎದುರು ಭಕ್ತರ ಪ್ರತಿಭಟನೆ

- Advertisement -
- Advertisement -

ಮಂಗಳೂರು: ಉಳ್ಳಾಲ ತಾಲೂಕಿನ ಕೊಂಡಾಣ ಪಿಲಿ ಚಾಮುಂಡಿ ದೈವಸ್ಥಾನದ ನಿರ್ಮಾಣ ಹಂತದ ಕಟ್ಟಡ ಧ್ವಂಸಗೊಳಿಸಿರುವ
ಘಟನೆ ಖಂಡಿಸಿ ದೈವಸ್ಥಾನದ ಭಕ್ತರಿಂದ ಬೃಹತ್ ಪ್ರತಿಭಟನೆ ನಡೆದಿದೆ.

ಕೋಟೆಕಾರು ಪಟ್ಟಣ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ದೈವಸ್ಥಾನದ ಭಕ್ತರು ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಧ್ವಂಸಗೊಳಿಸಲ್ಪಟ್ಟಿರುವ ದೈವಸ್ಥಾನದ ಭಂಡಾರ ಮನೆ ಕಟ್ಟಡವನ್ನು ಮರು ನಿರ್ಮಾಣ ಮಾಡಲು ಭಕ್ತರು ಆಗ್ರಹಿಸಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆಗೆ ಸೇರಿರುವ ದೈವಸ್ಥಾನದ ಕಟ್ಟಡ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ
ಮುತ್ತಣ್ಣ ಶೆಟ್ಟಿ, ಧೀರಜ್ ಹಾಗೂ ಶಿವರಾಜ್ ಎಂಬ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರು.

ದೈವಸ್ಥಾನದ ಆಡಳಿತ ಮಂಡಳಿ ನಡುವಿನ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಶನಿವಾರ ರಾತ್ರಿ ಜೆಸಿಬಿ ಮೂಲಕ ನಿರ್ಮಾಣ ಹಂತದಲ್ಲಿದ್ದ ಭಂಡಾರದ ಮನೆಯನ್ನು ಕೆಡವಿ ಹಾಕಲಾಗಿತ್ತು.

- Advertisement -

Latest News

error: Content is protected !!