Friday, June 5, 2026
Homeತಾಜಾ ಸುದ್ದಿಪ್ರವಾದಿ ಮುಹಮ್ಮದರ ಅವಹೇಳನ ಪ್ರಕರಣ; ನುಪೂರ್ ಬೆಂಬಲಕ್ಕೆ ನಿಂತ ಕಂಗನಾ

ಪ್ರವಾದಿ ಮುಹಮ್ಮದರ ಅವಹೇಳನ ಪ್ರಕರಣ; ನುಪೂರ್ ಬೆಂಬಲಕ್ಕೆ ನಿಂತ ಕಂಗನಾ

- Advertisement -
- Advertisement -

ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ನೂಪುರ್ ಶರ್ಮಾಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಬೆಂಬಲ ವ್ಯಕ್ತಪಡಿಸಿದ್ದಾರೆ.


ಈ ಕುರಿತು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕಂಗನಾ, ‘ನೂಪುರ್ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಅರ್ಹಳು. ಆಕೆಯನ್ನು ಗುರಿಯಾಗಿಸಿಕೊಂಡು ಎಲ್ಲಾ ರೀತಿಯ ಬೆದರಿಕೆಗಳನ್ನು ಹಾಕಲಾಗಿದೆ. ಪ್ರತಿ ಬಾರಿ ಹಿಂದೂ ದೇವರುಗಳನ್ನು ಅವಮಾನಿಸಿದಾಗ ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ.


ಇದು ಅಫ್ಘಾನಿಸ್ತಾನ ಅಲ್ಲ, ನಾವು ಸರಿಯಾಗಿ ಕಾರ್ಯನಿರ್ವಹಿಸುವ ಸರ್ಕಾರವನ್ನು ಹೊಂದಿದ್ದೇವೆ. ಅದನ್ನು ಪ್ರಜಾಪ್ರಭುತ್ವ ಎಂಬ ಪ್ರಕ್ರಿಯೆಯೊಂದಿಗೆ ಆಯ್ಕೆ ಮಾಡಲಾಗಿದೆ. ಇದು ಮರೆತು ಬಿಡುವವರಿಗೆ ಕೇವಲ ನೆನಪಿಸಿದ್ದು ಅಷ್ಟೇ’ ಎಂದು ಬರೆದುಕೊಂಡಿದ್ದಾರೆ.

- Advertisement -

Latest News

error: Content is protected !!