Tuesday, May 7, 2024
Homeತಾಜಾ ಸುದ್ದಿಕನ್ನಡದ ಆಕಾಶದೀಪ ಧಾರಾವಾಹಿ ಖ್ಯಾತಿ ನಟಿಯ ದಾಂಪತ್ಯದಲ್ಲಿ ಅಪಸ್ವರ; ಲವ್ ಜಿಹಾದ್ ಜಾಲಕ್ಕೆ ಸಿಲುಕಿದ್ರಾ ದಿವ್ಯಾ...

ಕನ್ನಡದ ಆಕಾಶದೀಪ ಧಾರಾವಾಹಿ ಖ್ಯಾತಿ ನಟಿಯ ದಾಂಪತ್ಯದಲ್ಲಿ ಅಪಸ್ವರ; ಲವ್ ಜಿಹಾದ್ ಜಾಲಕ್ಕೆ ಸಿಲುಕಿದ್ರಾ ದಿವ್ಯಾ ಶ್ರೀಧರ್

spot_img
- Advertisement -
- Advertisement -

ಬೆಂಗಳೂರು : ಕನ್ನಡದ ಆಕಾಶದೀಪ ಧಾರಾವಾಹಿ ಖ್ಯಾತಿಯ ನಟಿ ದಿವ್ಯಾ ಶ್ರೀಧರ್ ವೈವಾಹಿಕ ಬದುಕಿನಲ್ಲಿ ಅಪಸ್ವರ ಮೂಡಿದೆ. ದಿವ್ಯಾ ಶ್ರೀಧರ್ ನಟ ಅಮ್ಜದ್​ ಅಲಿಯಾಸ್​ ಅರ್ನವ್​ ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದರು. ಆದ್ರೀಗ ನಟಿ ಕಣ್ಣೀರು ಹಾಕುತ್ತಿದ್ದಾರೆ.

‘ನನಗೂ ಅರ್ನವ್​ಗೂ ಮದುವೆ ಆಗಿದೆ. ಆರ್ನವ್ ನನಗೆ ಸಾಕಷ್ಟು ಹಿಂಸೆ ಕೊಡ್ತಿದ್ದಾನೆ. ಮದುವೆ ವಿಚಾರವನ್ನು ಗುಟ್ಟಾಗಿ ಇಡುವಂತೆ ಹೇಳ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕದಂತೆ ಎಚ್ಚರಿಕೆ ಕೊಟ್ಟಿದ್ದಾನೆ. ಇದೇ ವಿಚಾರಕ್ಕೆ ಹಲವು ಬಾರಿ ನನ್ನ ಮೇಲೆ ಹಲ್ಲೆಯಾಗಿದೆ’ ಎಂದಿರುವ ದಿವ್ಯಾ, ಎಂದು ದಿವ್ಯಾ ತಮಗಾಗುತ್ತಿರುವ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

‘2017ರಲ್ಲಿ ನಾವಿಬ್ಬರೂ ಒಂದೇ ಸೀರಿಯಲ್​ನಲ್ಲಿ ಆಕ್ಟಿಂಗ್​ ಮಾಡ್ತಿದ್ವಿ. ಆಗ ನಾವಿಬ್ಬರೂ ಫ್ರೆಂಡ್ಸ್​ ಆದ್ವಿ. ಆಮೇಲೆ ಪ್ರೀತಿಸಿ ಮದ್ವೆ ಆದ್ವಿ. 2 ವರ್ಷದ ಹಿಂದೆ ಒಂದು ಮನೆ ಖರೀದಿಸಿದೆವು. ಮನೆ ತೆಗೆದುಕೊಳ್ಳುವಾಗ ನಾನು ಅವನಿಗೆ ಹಣದ ಸಹಾಯ ಮಾಡಿದ್ದೇನೆ. ಕೊರೊನಾ ಲಾಕ್​ಡೌನ್​ ವೇಳೆ ಅವನ ಜೊತೆ 2 ವರ್ಷ ಮನೆಯಲ್ಲೇ ಇದ್ದ. ಆಗ ಅವನಿಗೆ ಏನು ಬೇಕೋ ಎಲ್ಲವನ್ನೂ ತಂದು ಕೊಟ್ಟೆ. ಏನೂ ಕಷ್ಟ ಬಾರದಂತೆ ಚೆನ್ನಾಗಿ ನೋಡಿಕೊಂಡೆ. ಕೆಲಸ ಇಲ್ಲ ಅನ್ನೋ ನೋವು ಕಾಡದಂತೆ ನನ್ನ ಗಂಡನನ್ನು ಮಗು ಥರ ನೋಡಿಕೊಂಡೆ. ನಾನು ಅವನಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ.

ಇದೀಗ ನನ್ನ ಪತಿ ನನ್ನನ್ನು ದೂರ ಇಟ್ಟಿದ್ದಾನೆ. ನನಗೆ ಅವನು ಬೇಕು. ನನ್ನ ಗಂಡ ನನ್ನನ್ನು ದೂರ ಮಾಡಿದ್ರೂ ನನಗೆ ಅವನೇ ಬೇಕು. ನನ್ನ ಹಾಗೂ ನನ್ನ ಮಗುವಿಗಾಗಿ ನೀವೆಲ್ಲರೂ ಪ್ರಾರ್ಥಿಸಿ’ ಎಂದು ನಟಿ ದಿವ್ಯಾ ಕಣ್ಣೀರಿಟ್ಟಿದ್ದಾರೆ.

ದಿವ್ಯಾರನ್ನು ಪರಿಚಯ ಮಾಡಿಕೊಳ್ಳುವಾಗ ತನ್ನ ಹೆಸರು ಅರ್ನವ್​ ಎಂದು ಹೇಳಿಕೊಂಡಿದ್ದನಂತೆ. ಅಸಲಿ ಹೆಸರು ಅಮ್ಜದ್​ ಖಾನ್​. ಆದರೂ ಹೆಸರನ್ನು ಏಕೆ ಮುಚ್ಚಿಟ್ಟರು ಎಂಬ ಪ್ರಶ್ನೆ ಮೂಡಿದ್ದು, ಇದು ಲವ್​ ಜಿಹಾದ್ ಇರಬಹುದಾ ಎಂಬ ಅನುಮಾನ ಶುರುವಾಗಿದೆ.

- Advertisement -
spot_img

Latest News

error: Content is protected !!