Saturday, April 20, 2024
Homeತಾಜಾ ಸುದ್ದಿಅಂತರ್ಧರ್ಮೀಯ ವಿವಾಹವಾಗಿರುವ ನಟಿ ಪ್ರಿಯಾಮಣಿ ಧರ್ಮ ಬದಲಾಯಿಸಿದ್ದಾರೆಯೇ ? ಈ ಬಗ್ಗೆ ಅಯ್ಯರ್ ಬೆಡಗಿ ಹೇಳೋದೇನು...

ಅಂತರ್ಧರ್ಮೀಯ ವಿವಾಹವಾಗಿರುವ ನಟಿ ಪ್ರಿಯಾಮಣಿ ಧರ್ಮ ಬದಲಾಯಿಸಿದ್ದಾರೆಯೇ ? ಈ ಬಗ್ಗೆ ಅಯ್ಯರ್ ಬೆಡಗಿ ಹೇಳೋದೇನು ?

spot_img
- Advertisement -
- Advertisement -

ಬೆಂಗಳೂರು: ಲಾಕ್ಡೌನ್ ಅವಧಿಯಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದ ನಟಿ ಪ್ರಿಯಾಮಣಿ (ಪ್ರಿಯಾ ವಾಸುದೇವ್ ಮಣಿ ಅಯ್ಯರ್) ಮಾಧ್ಯಮ ಒಂದರ ಸಂದರ್ಶನದ ವೇಳೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. ಅಂತರ್ ಧರ್ಮದ ವಿವಾಹದ ಕುರಿತು ಅವರು ವ್ಯಕ್ತ ಪಡಿಸಿದ ಅಭಿಪ್ರಾಯ ಸಾಕಷ್ಟು ಸುದ್ದಿ ಮಾಡುತ್ತಿದೆ. ಡ್ರಗ್ಸ್ ವಿಚಾರದಲ್ಲಿ ಅಭಿಪ್ರಾಯ ಹೇಳಲು ನಿರಾಕರಿಸಿದ ಪ್ರಿಯಾಮಣಿ ಅಂತರ್ ಧರ್ಮದ ವಿವಾಹದಲ್ಲಿ ಮದುವೆಯಾದ ಮೇಲೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಹೇಗೆ ಹೇಳಿ? ಅವರ ಆಹಾರ ರೀತಿ ಬೇರೆ ಎನ್ನುವುದನ್ನು ಬಿಟ್ಟರೆ ಅವರು ಪ್ರಾಮುಖ್ಯತೆ ನೀಡುವುದು ಕೂಡ ಒಳ್ಳೆಯ ಹೆಲ್ತೀಫುಡ್‌ ಬಗ್ಗೆಯೇ. ಹಾಗಾಗಿ ಅದನ್ನು ಅಭ್ಯಾಸ ಮಾಡಿಕೊಂಡರೆ ನನಗೆ ತೊಂದರೆ ಏನೂ ಇಲ್ಲವಲ್ಲ ಎಂದರು.

ನನ್ನ ಪತಿ ಮುಸ್ತಫಾ ರಾಜ್ ರ ತಂದೆ ತಾಯಿ ವರ್ಷದ ಒಂದಷ್ಟು ಸಮಯ ದುಬೈನಲ್ಲಿರುತ್ತಾರೆ. ಅವರು ಮನೆಗೆ ಬಂದ ಸಮಯದಲ್ಲೇ ಲಾಕ್ಡೌನ್ ಆಯಿತು. ಅವರು ಬೊಹ್ರ ಮುಸಲ್ಮಾನರು. ಕೂಲ್ ಆಗಿಯೇ ಇರುತ್ತಾರೆ ಆದರೂ ಸಂಪ್ರದಾಯವಾದಿಗಳು. ಹಾಗಿದ್ದರೂ ನಾನು ಕೂಡ ಅವರೊಂದಿಗೆ ಒಂದೇ ಕುಟುಂಬವಾಗಿ ಖುಷಿಯಿಂದ ಕಾಲ ಕಳೆದಿದ್ದೇನೆ. ಇದಕ್ಕಿಂತ ಹೊಂದಾಣಿಕೆ ಇನ್ನೇನು ಬೇಕು ಎಂದು ಪ್ರಶ್ನಿಸಿದರು.

ಸಂಪ್ರದಾಯವಾದಿಗಳು ಅಂದರೆ ಅದು ಅವರಿಗಷ್ಟೇ ಅನ್ವಯವಾಗುತ್ತದೆ. ಯಾಕೆಂದರೆ ನಾನು ಅಂತರ್ಧರ್ಮೀಯ ವಿವಾಹವಾಗಿದ್ದೇನೆಯೇ ಹೊರತು, ನನ್ನ ಧರ್ಮವನ್ನು ಬದಲಾಯಿಸಿಲ್ಲ. ಇದನ್ನು ಮದುವೆಗೆ ಮೊದಲೇ ನಾನು ನನ್ನ ಪತಿಗೆ ಸ್ಪಷ್ಟಪಡಿಸಿದ್ದೆ ಕೂಡ. ‘ಏನೇ ಆದರೂ ನಾನು ನಿಮಗಾಗಿ ಅಥವಾ ನಿಮ್ಮ ತಂದೆ ತಾಯಿಗಾಗಿ ಧರ್ಮ ಬದಲಾಯಿಸುವ ಪ್ರಯತ್ನ ಮಾಡುವುದಿಲ್ಲ ಎಂದರು.

ಯಾಕೆಂದರೆ ನಾನು ಹುಟ್ಟಿರುವುದು ಹಿಂದೂ ಧರ್ಮದಲ್ಲಿ. ಅದನ್ನು ಬದಲಾಯಿಸುವುದು ನನ್ನ ವೈಯಕ್ತಿಕ ಆಯ್ಕೆಯಾಗಿರಬೇಕೇ ಹೊರತು ಯಾರದೋ ಒತ್ತಡಕ್ಕಾಗಿ ನಾನು ಬದಲಾಯಿಸಲಾರೆ,’ ಎಂದು ಹೇಳಿದ್ದೆ. ಅವರ ಕಡೆಯಿಂದಲೂ ಯಾವುದೇ ಒತ್ತಡ ಇರಲಿಲ್ಲ. ಹಾಗಾಗಿಯೇ ನಮ್ಮೊಳಗೆ ಧರ್ಮದ ವಿಚಾರದಲ್ಲಿ ಇದುವರೆಗೆ ಯಾವುದೇ ಗೊಂದಲಗಳಾಗಿಲ್ಲ ನನ್ನ ಪ್ರಕಾರ ಅಂತಿಮವಾಗಿ ನಾವೆಲ್ಲ ಭಾರತೀಯರು. ಆಚರಣೆಗಳು ಬೇರೆಯಾದರೂ ಎಲ್ಲರೂ ಒಂದಾಗಿಯೇ ಇರಬೇಕಾದವರು ಎಂದು ತೀರಾ ಬೋಲ್ಡ್ ಆಗಿ ಉತ್ತರಿಸಿದರು.

- Advertisement -
spot_img

Latest News

error: Content is protected !!