Saturday, June 6, 2026
Homeತಾಜಾ ಸುದ್ದಿಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಯಲಾಯ್ತು ಖ್ಯಾತ ನಟನ ಹೆಸರು...

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಯಲಾಯ್ತು ಖ್ಯಾತ ನಟನ ಹೆಸರು…

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಇದೀಗ ನಟಿಯರ ಬಳಿಕ ನಟರ ಸರದಿ. ದಿಗಂತ್, ಅಕು್ ಬಾಲಾಜಿ, ಸಂತೋಷ್ ಕುಮಾರ ಬಳಿಕ ಇದೀಗ ಖ್ಯಾತ ನಟರೊಬ್ಬರ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿದೆ.

ಹೌದು.. ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಫೇಸ್ ಬುಕ್ ಖಾತೆಯಲ್ಲಿ ನಟನೊಬ್ಬರ ಹೆಸರು ಉಲ್ಲೇಖಿಸಿದ್ದಾರೆ. ಅದು ಬೇರಾರು ಅಲ್ಲ ಲೂಸ ಮಾದ ಯೋಗಿ. ಇದು ಇದೀಗ ಸ್ಯಾಂಡಲ್ ವುಡ್ ಅಂಗಳದಲ್ಲಿ ಹಾಗೂ ಅಭಿಮಾನಿಗಳಲ್ಲಿ ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐಎಸ್ ಡಿ(ISD) ಲೂಸ್ ಮಾದ ಯೋಗಿ ಅವರನ್ನು ಕರೆದು ವಿಚಾರಣೆಯನ್ನು ನಡೆಸಿದೆ.

ವಿಚಾರಣೆ ವೇಳೆ ISD ಮುಂದೆ ಲೂಸ ಮಾದ ಯೊಗೇಶ್ ತನ್ನ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ನಾನು ಸತತ ಸಿನಿಮಾಗಳ ಸೋಲಿನಿಂದ ಕಂಗೆಟ್ಟು ಮದ್ಯ ಸೇವಿಸುತ್ತಿದ್ದೆ. ಮದ್ಯ ಸೇವಿಸದಂತಹ ಸಂದರ್ಭದಲ್ಲಿ ನಾನೊಮ್ಮೆ ಡ್ರಗ್ಸ್ ಸೇವಿಸಿದ್ದೆ ಎಂದು ಲೂಸ ಮಾದ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ ಅಲ್ಲದೇ ಡ್ರಗ್ಸ್ ಚಟದಿಂದಾಗಿ ನನ್ನ ಸಿನಿಮಾ ಬದುಕು ಹಾಳಾಯ್ತು ಅಂತಾ ಲೂಸ ಮಾದ ಯೋಗಿ ಬೇಸರ ತೋಡಿಕೊಂಡಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿದೆ.

ಲೂಸ ಮಾದ ಬಳಿಕ ಈ ಪ್ರಕರಣದಲ್ಲಿ ಮತ್ತೆ ಇನ್ನು ಯಾರ್ಯಾರ ಹೆಸರು ಹೊರಗೆ ಬರುತ್ತೋ ಕಾದು ನೋಡ್ಬೇಕಾಗಿದೆ..

- Advertisement -

Latest News

error: Content is protected !!