Friday, May 3, 2024
Homeಕರಾವಳಿದ.ಕ ಜಿಲ್ಲೆಯಲ್ಲಿ ಇಂದಿನಿಂದ ಮಧ್ಯಾಹ್ನದವರೆಗೆ ಬಸ್ ಸಂಚಾರ ವಿಚಾರ : ಜೂ. 30ರವರೆಗೆ ರಸ್ತೆಗಿಳಿಯಲ್ಲ...

ದ.ಕ ಜಿಲ್ಲೆಯಲ್ಲಿ ಇಂದಿನಿಂದ ಮಧ್ಯಾಹ್ನದವರೆಗೆ ಬಸ್ ಸಂಚಾರ ವಿಚಾರ : ಜೂ. 30ರವರೆಗೆ ರಸ್ತೆಗಿಳಿಯಲ್ಲ ಖಾಸಗಿ ಬಸ್ ಗಳು ಎಂದ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಹೊಸ ಕೊರೊನಾ ಹೊಸ ಮಾರ್ಗಸೂಚಿ ಜಾರಿಯಲ್ಲಿದೆ. ಅದರಂತೆ ಜಿಲ್ಲಾಡಳಿತ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಖಾಸಗಿ ಬಸ್ ಗಳನ್ನು ಜೂನ್ 30ರ ತನಕ ರಸ್ತೆಗಿಳಿಸುವುದಿಲ್ಲ ಎಂದು ದ.ಕ. ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ  ಸ್ಪಷ್ಟನೆ ನೀಡಿದ್ದಾರೆ.

ಮಧ್ಯದಲ್ಲಿ ಬಸ್ ಓಡಿಸಿದ್ರೆ ಟ್ಯಾಕ್ಸ್ ಸೇರಿ ಇತರೆ ಆರ್ಥಿಕ ಹೊರೆ ಎದುರಿಸಬೇಕಾಗುತ್ತದೆ. ಹೀಗಾಗಿ ಸದ್ಯಕ್ಕೆ ಬಸ್ ಸಂಚಾರ ಮಾಡದಿರಲು ನಿರ್ಧರಿಸಿದ್ದೇವೆ. ಇನ್ನೂ ಡಿಸೇಲ್ ಬೆಲೆಯೇರಿಕೆ ಮಧ್ಯೆ 50% ಸೀಟಿಂಗ್ ಹಾಕಿ ಬಸ್ ಓಡಿಸಲು ಸಾಧ್ಯವಿಲ್ಲ.ಬಸ್ ಓಡಿಸಿದ್ರೆ ಟ್ಯಾಕ್ಸ್ ಕೂಡ ಕಟ್ಟಬೇಕಾಗಿರುವ ಕಾರಣ ಅದು ಕಷ್ಟ. ಹೀಗಾಗಿ ಈ ತಿಂಗಳ ಅಂತ್ಯದವರೆಗೆ ಬಸ್ ಓಡಿಸದೇ ಇರಲು ನಿರ್ಧಾರ ಮಾಡಿದ್ದೇವೆ.

ಜೊತೆಗೆ ಎರಡು ತಿಂಗಳಿನಿಂದ ನಿಂತಿರುವ ಬಸ್ ಏಕಾಏಕಿ ಓಡಿಸಲು ಆಗಲ್ಲ ಎಂದು ದಕ್ಷಿಣಕನ್ನಡ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ  ಸ್ಪಷ್ಟನೆ ನೀಡಿದ್ದಾರೆ.

- Advertisement -
spot_img

Latest News

error: Content is protected !!