Tuesday, April 30, 2024
Homeತಾಜಾ ಸುದ್ದಿನಾಯಿಯ ಶಸ್ತ್ರ ಚಿಕಿತ್ಸೆಗೆ ಬೇಕಾಗಿದೆ ರಕ್ತ : ಸೋಷಿಯಲ್ ಮೀಡಿಯಾದಲ್ಲಿ ನಾಯಿ ಮಾಲೀಕನಿಂದ ಮನವಿ

ನಾಯಿಯ ಶಸ್ತ್ರ ಚಿಕಿತ್ಸೆಗೆ ಬೇಕಾಗಿದೆ ರಕ್ತ : ಸೋಷಿಯಲ್ ಮೀಡಿಯಾದಲ್ಲಿ ನಾಯಿ ಮಾಲೀಕನಿಂದ ಮನವಿ

spot_img
- Advertisement -
- Advertisement -

ಬೆಂಗಳೂರು:  ನಾಯಿಯೊಂದಕ್ಕೆ ಶಸ್ತ್ರ ಚಿಕಿತ್ಸೆಗೆ ರಕ್ತ ಬೇಕೆಂದು ಕೋರಿ ಸಾರ್ವಜನಿಕರೊಬ್ಬರು ಮನವಿ ಮಾಡಿಕೊಂಡಿದ್ದಾರೆ. ಮನುಷ್ಯರು ಅನಾರೋಗ್ಯಕ್ಕೀಡಾದಾಗ ಅಥವಾ ಗಾಯಗೊಂಡಾಗ ಅವರಿಗಾಗಿ ಸೂಕ್ತ ರಕ್ತದ ಅಗತ್ಯವಿದೆ ಎಂದು ಬೇಡಿಕೆಯನ್ನು ಇಡುವುದು ಹೊಸದೇನಲ್ಲ. ಅಂಥ ಒಂದಲ್ಲ ಒಂದು ಬೇಡಿಕೆ ಆಗಾಗ ಕಣ್ಣಿಗೆ ಕಾಣಿಸುತ್ತಲೇ ಇರುತ್ತದೆ. ಆದರೆ ಇಲ್ಲೊಂದು ಕಡೆ ನಾಯಿಯ ಶಸ್ತ್ರಚಿಕಿತ್ಸೆಗಾಗಿ ರಕ್ತ ಬೇಕಿದೆ ಎಂಬ ಬೇಡಿಕೆಯೊಂದು ಹರಿದಾಡುತ್ತಿದೆ.

ಮೂರು ತಿಂಗಳ ನಾಯಿ ಮೇಲೆ ಕಾರು ಹರಿದುಹೋಗಿ ಅದರ ಕಾಲಿನ ಮೂಳೆ ಮುರಿದಿದೆ. ಮೂಳೆಯ ಸರ್ಜರಿ ಮಾಡಲು ಸೂಕ್ತವಾದ ರಕ್ತದ ಅಗತ್ಯವಿದೆ. ನಿಮ್ಮಲ್ಲಿ ಇದಕ್ಕೆ ಸರಿಹೊಂದುವಂಥ ನಾಯಿ ಇದ್ದರೆ ಅದರ ರಕ್ತದಾನ ಮಾಡಿ ಎಂಬುದಾಗಿ ಮೈಸೂರಿನ ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

- Advertisement -
spot_img

Latest News

error: Content is protected !!