Saturday, May 4, 2024
Homeಕರಾವಳಿಬಂಟ್ವಾಳ: ನಡುಮೊಗರು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ; ಕಾರ್ಯಕ್ರಮ ನೆರವೇರಿಸಿದ ಶಾಸಕ ರಾಜೇಶ್...

ಬಂಟ್ವಾಳ: ನಡುಮೊಗರು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ; ಕಾರ್ಯಕ್ರಮ ನೆರವೇರಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

spot_img
- Advertisement -
- Advertisement -

ಬಂಟ್ವಾಳ: ರಾಜ್ಯ ಸರಕಾರ ಈ ಬಾರಿ ಬಜೆಟ್ ನಲ್ಲಿ ಸರಕಾರಿ ಶಾಲಾ ಅಭಿವೃದ್ಧಿ ಗಾಗಿ ಈ ಹಿಂದಿಗಿಂತಲೂ ಹೆಚ್ಚಾಗಿ 15 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದ್ದು, ಬಂಟ್ವಾಳದಲ್ಲಿ ಸರಕಾರಿ ಶಾಲೆಗಳ ಸುಮಾರು 100 ಕೊಠಡಿಗಳನ್ನು ಈ ಬಾರಿ ನಿರ್ಮಿಸವ ಗುರಿ ಹೊಂದಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.


ಅವರು 42 ಲಕ್ಷ ಅನುದಾನದಲ್ಲಿ ಮಣಿನಾಲ್ಕೂರು ಗ್ರಾಮ ದ ನಡುಮೊಗರು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ವನ್ನು ಉದ್ಘಾಟಿಸಿ ದ ಬಳಿಕ ಮಾತನಾಡಿದರು.


ನಡುಮೊಗರು ಶಾಲೆಯ ಕಟ್ಟಡ ಕಳೆದ ವರ್ಷ ಕುಸಿತಕ್ಕೊಳಗಾದ ಸಂದರ್ಭದಲ್ಲಿ ದಿ.ಶಿವರಾಮ ಶೆಟ್ಟಿ ನಡುಮೊಗರುಗುತ್ತು ಅವರ ಮನವಿಯಂತೆ ಶಾಲೆಗೆ ಬೇಟಿ ನೀಡಿ ಪರಿಶೀಲನೆ ನಡೆದಿದ್ದು, ತಕ್ಷಣ ನಾಲ್ಕು ಕೊಠಡಿ ಗಳ ನಿರ್ಮಾಣಕ್ಕೆ ಸೂಚನೆ ನೀಡಿದ್ದೆ.ಪ್ರಸ್ತುತ ಎಂ.ಆರ್.ಪಿ.ಎಲ್ ಹಾಗೂ ಶಾಸಕರ ನಿಧಿಯ ಮೂಲಕ ಸುಮಾರು 42 ಲಕ್ಷ ವೆಚ್ಚದಲ್ಲಿ ನೂತನ ಕೊಠಡಿಗಳ ನಿರ್ಮಾಣ ಆಗಿದೆ.


ಶಾಲೆಗಳ ಅಭಿವೃದ್ಧಿ ಎಂದರೆ ದೇವಸ್ಥಾನ ನಿರ್ಮಾಣದಷ್ಟು ಪುಣ್ಯ ಸಿಗುತ್ತದೆ ಎಂದು ಅವರು ಹೇಳಿದ್ದು, ತಾಲೂಕಿನ ಪ್ರತಿ ಸರಕಾರಿ ಶಾಲೆಗಳ ಅಭಿವೃದ್ಧಿ ಗಾಗಿ ನಾವು ತಯಾರಿದ್ದೇವೆ ಎಂದು ಹೇಳಿದರು.
ಇಂದು ಉದ್ಘಾಟನೆಗೊಂಡ ನಡುಮೊಗರು ಸರಕಾರಿಯ ಶಾಲೆಯ ಕೊಠಡಿಗಳಿಗೆ ನೂತನ ಪೀಠೋಪಕರಣ ಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಇಂದು ವೇದಿಕೆಯಲ್ಲಿ ನೂತನವಾಗಿ ಉದ್ಘಾಟನೆ ಯಾದ ಶಿವರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಈ ಶಾಲೆಯನ್ನು ದತ್ತು ಪಡೆದು, ಸರ್ವಾಂಗೀಣ ಅಭಿವೃದ್ಧಿ ಮೂಲಕ ತಾಲೂಕಿಗೆ ಮಾದರಿಯಾಗಲು ಅವಕಾಶ ಮಾಡಿಕೊಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸೂಚನೆ ನೀಡಿದರು.


ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಹೃದಯ ಶ್ರೀಮಂತಿಕೆಯುಳ್ಳ ರಾಜ್ಯದ ಏಕೈಕ ಶಾಸಕ ರಾಜೇಶ್ ನಾಯ್ಕ್ ಅವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಅಚ್ಚರಿ ಪಡುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ ಎಂದು ಅವರು ಹೇಳಿದರು.


ದೇಶಕ್ಕೆ ಆಸ್ತಿಯಾಗುವ, ಮನುಷ್ಯ,ಮನುಷ್ಯನ ನ್ನು ಪ್ರೀತಿಸುವ ಸಂಸ್ಕಾರಯುತ ಮಕ್ಕಳನ್ನು ನಿರ್ಮಾಣ ಮಾಡುವ ಕೆಲಸ ಶಿಕ್ಷಕರ ಮುಖಾಂತರ ನಡೆಯಬೇಕು ಎಂದು ಅವರು ಹೇಳಿದರು.


ಮಣಿನಾಲ್ಕೂರು ಗ್ರಾಮ ಪಂಚಾಯತ್ ಆಧ್ಯಕ್ಷೆ ನಾಗವೇಣಿ, ಗ್ರಾ.ಪಂ.ಸದಸ್ಯರಾದ ಪ್ರೆಸಿಲ್ಲಾ ಡಿ.ಸೋಜ, ಯೋಗೀಶ್ ಶೆಟ್ಟಿ ಆರ್ಮುಡಿ, ಕಾಂಚಲಾಕ್ಷಿ, ಪುರುಷೋತ್ತಮ ಪೂಜಾರಿ,ಕುಂಬ್ರ ನಡುಮೊಗರು ಗುತ್ತು ಕೆ.ಎನ್.ಶಿವರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಶಕುಂತಲಾಶಿವರಾಮ ಶೆಟ್ಟಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾಯಿಗಿರಿದರ್ ಶೆಟ್ಟಿ, ಉದ್ಯಮಿ ಕುಸುಮಾದರ ಶೆಟ್ಟಿ ಚೆಲ್ಲಡ್ಕ, ಪ್ರೋ. ಡಾ. ಶ್ಯಾಮಪ್ರಸಾದ್ ಶೆಟ್ಟಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಎಂ.ಆರ್.ಪಿ.ಎಲ್ ನ ಪ್ರತಿನಿಧಿ ರಾಕೇಶ್ ಕೆ, ಎಲ್.ಐ.ಸಿ.ಅಭಿವೃದ್ದಿ ಅಧಿಕಾರಿ, ಲಯನ್ ವಸಂತ ಶೆಟ್ಟಿ, ಉದ್ಯಮಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಪ್ರಮುಖರಾದ ಶಾಂತಪ್ಪ ಪೂಜಾರಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಉಮೇಶ್ ಕೆ. ನಡುಮೊಗರು ಯುವಕ ಮಂಡಲದ ಅಧ್ಯಕ್ಷ ದಯಾನಂದ, ಮುಖ್ಯೋಪಾಧ್ಯಾಯ ಚಂದ್ರ ಕೆ.ಅವರು ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಮಕ್ಕಳಿಗೆ ಸಮವಸ್ತ್ರ, ಪುಸ್ತಕ ಹಾಗೂ ಶಾಲಾ ಬ್ಯಾಗ್ ವಿತರಿಸಲಾಯಿತು. ಶಾಲಾ ಅಭಿವೃದ್ಧಿಗಾಗಿ ಕೊಡುಗೆ ನೀಡಿದ ವಿವಿಧ ಗಣ್ಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ನಡುಮೊಗರು ಸರಕಾರಿ ಶಾಲೆಯಲ್ಲಿ ಬಿಸಿಯೂಟ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ಶಾಸಕ ರಾಜೇಶ್ ನಾಯ್ಕ್ ನೆರವೇರಿಸಿದರು.


ಸಹ ಶಿಕ್ಷಕ ಮಧುಸೂದನ್ ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಚಂದ್ರ ಕೆ.ಧನ್ಯವಾದ ನೀಡಿದರು. ಶಿಕ್ಷಕ ಸಂದೇಶ್ ಎಂ.ಗೌಡ ಕಾರ್ಯಕ್ರಮ ನಿರೂಪಿಸಿದರು.

- Advertisement -
spot_img

Latest News

error: Content is protected !!