Saturday, June 6, 2026
Homeತಾಜಾ ಸುದ್ದಿಜೈಲಿನಲ್ಲಿದ್ದ ಮಗನಿಗಾಗಿ ಡ್ರಗ್ಸ್ ತಂದು ಕೊಟ್ಟ ಹೆತ್ತ ತಾಯಿ : ಮಾಡಿದ ತಪ್ಪಿಗೆ ಪರಪ್ಪನ ಅಗ್ರಹಾರದಲ್ಲಿ...

ಜೈಲಿನಲ್ಲಿದ್ದ ಮಗನಿಗಾಗಿ ಡ್ರಗ್ಸ್ ತಂದು ಕೊಟ್ಟ ಹೆತ್ತ ತಾಯಿ : ಮಾಡಿದ ತಪ್ಪಿಗೆ ಪರಪ್ಪನ ಅಗ್ರಹಾರದಲ್ಲಿ ಒಟ್ಟಿಗೆ ಮುದ್ದೆ ಮುರಿಯುತ್ತಿದ್ದಾರೆ ತಾಯಿ ಮಗ

- Advertisement -
- Advertisement -

ಬೆಂಗಳೂರು : ಜೈಲಿನಲ್ಲಿದ್ದ ಮಗನನ್ನು ಭೇಟಿಯಾಗಿ ಬಟ್ಟೆ ಕೊಡುವ ನೆಪದಲ್ಲಿ ಮಾದಕ ವಸ್ತು ಹ್ಯಾಶಿಷ್ ಆಯಿಲ್ ನೀಡಲು ಯತ್ನಿಸಿದ್ದ ತಾಯಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಪರ್ವೀನ್ ತಾಜ್ ಬಂಧಿತ ಮಹಿಳೆಯ. ಈಕೆಯ ಮಗ ಮೊಹಮ್ಮದ್ ಬಿಲಾಲ್ ಎಂಬಾತ ರಾಬರಿ ಸೇರಿದಂತೆ 11 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಕೋಣನಕುಂಟೆ ಪೊಲೀಸರು ಬಿಲಾನ್‌ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದರು.

ತಾಯಿ-ಮಗ ಶಿಕಾರಿಪಾಳ್ಯದಲ್ಲಿ ವಾಸವಾಗಿದ್ದರು‌. ಮಗನನ್ನು ನೋಡಲು ಆಗಾಗ ಪರ್ವೀನ್ ಜೈಲಿಗೆ ಬರುತ್ತಿದ್ದಳು. ಆದರೆ ಕಳೆದ ಜೂನ್ 13ರಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ಈಕೆ ಮಗನಿಗೆ ಬಟ್ಟೆ ಕೊಡುವ ನೆಪದಲ್ಲಿ ಊಟದ ಬಾಕ್ಸ್‌ನಲ್ಲಿ 5 ಲಕ್ಷ ಮೌಲ್ಯದ ಹ್ಯಾಶಿಷ್ ಆಯಿಲ್ ತಂದಿದ್ದಳು.

ಜೈಲು ಸಿಬ್ಬಂದಿ ಈಕೆಯನ್ನು ಪರಿಶೀಲಿಸಿದ ವೇಳೆ ಬಟ್ಟೆಯ ಜೊತೆಯಲ್ಲಿ ಮಾದಕ ವಸ್ತು ಪತ್ತೆಯಾಗಿತ್ತು. ತಕ್ಷಣ ಜೈಲು ಸಿಬ್ಬಂದಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ತಾಯಿ ಪರ್ವೀನ್ ತಾಜ್ ಹಾಗೂ ಮಗ ಬಿಲಾಲ್ ಮೇಲೆ ಕೇಸ್ ದಾಖಲಿಸಿರುವ ಪರಪ್ಪನ ಅಗ್ರಹಾರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ನನಗೆ ಯಾರೋ ಫೋನ್ ಮಾಡಿ ಜೈಲಿನಲ್ಲಿರುವ ವ್ಯಕ್ತಿಗೆ ಮಗನ ಮುಖಾಂತರ ಬಟ್ಟೆ‌ಯ ಬ್ಯಾಗ್ ನೀಡಬೇಕೆಂದು ಎಂದರು.‌ ಇದರಂತೆ ನಾನು ಬ್ಯಾಗ್ ನೀಡಲು ಒಪ್ಪಿಕೊಂಡೆ. ಬ್ಯಾಗ್‌ನಲ್ಲಿ ಡ್ರಗ್ಸ್ ಇರುವುದು ಗೊತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.‌ ಈಕೆ‌ ಹೇಳಿಕೆ ಮೇರೆಗೆ ಫೋನ್‌ ಬಂದಿದ್ದ ಮೊಬೈಲ್‌ ನಂಬರ್ ಆಧರಿಸಿ ಪೊಲೀಸರು ತನಿಖೆ‌ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!