Sunday, August 30, 2026
Homeಕರಾವಳಿಸುಳ್ಯ;ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಇಂದಿಗೆ ಒಂದು ವರ್ಷ; ಪ್ರವೀಣ್ ಸ್ಮರಣಾರ್ಥ ರಕ್ತದಾನ ಶಿಬಿರ

ಸುಳ್ಯ;ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಇಂದಿಗೆ ಒಂದು ವರ್ಷ; ಪ್ರವೀಣ್ ಸ್ಮರಣಾರ್ಥ ರಕ್ತದಾನ ಶಿಬಿರ

- Advertisement -
- Advertisement -

ಸುಳ್ಯ;  ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ದುಷ್ಕರ್ಮಿಗಳಿಂದ ಹತ್ಯೆಯಾಗಿ ಇಂದಿಗೆ ಒಂದು ವರ್ಷ. ಈ ಹಿನ್ನೆಲೆ ಸುಳ್ಯ ಬಿಜೆಪಿ ಮಂಡಲ ವತಿಯಿಂದ ಪ್ರವೀಣ್ ಸ್ಮರಣಾರ್ಥ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು.

ನೆಟ್ಟಾರಿನಲ್ಲಿ ಪ್ರವೀಣ್ ಮನೆಯಲ್ಲಿರುವ ಪ್ರವೀಣ್ ನೆಟ್ಟಾರು ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಕ್ತದಾನ ಶಿಬಿರಕ್ಕೆ ಸುಳ್ಯ ಶಾಸಕಿ ಬಾಗೀರಥಿ ಮುರುಳ್ಯ ಚಾಲನೆ ನೀಡಿದರು. ಪ್ರವೀಣ್ ಕುಟುಂಬಕ್ಕೆ ಬಿಜೆಪಿ‌ ಪಕ್ಷ, ಹಿಂದೂ ಸಂಘಟನೆಗಳು ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಬಿಜೆಪಿ, ಸಂಘಟನೆಗಳು ಪ್ರವೀಣ್ ರನ್ನು ತಮ್ಮ ಮನೆ ಮಗನಾಗಿ ನೋಡಿಕೊಂಡಿದೆ. ಬಿಜೆಪಿ‌ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರವೀಣ್ ಕನಸಿನ ಮನೆ ನಿರ್ಮಿಸಲಾಗಿದೆ. ಸಂಘ ಪರಿವಾರ, ಬಿಜೆಪಿ ಮುಖಂಡರು ನಿರಂತರವಾಗಿ ನಮ್ಮ ಜೊತೆ ನಿಂತಿದ್ದಾರೆ. ಮುಂದೆಯೂ ನಮ್ಮ ಜೊತೆ ನಿಲ್ಲುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

- Advertisement -

Latest News

error: Content is protected !!