Tuesday, May 7, 2024
Homeಕರಾವಳಿಬಿಲ್ಲವ ಸಮುದಾಯದ ಯುವಕರು ಇನ್ನು ಮುಂದೆ ಕೋಮು ಗಲಾಟೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು‌ ಶಪಥ ಮಾಡಬೇಕು: ಬ್ರಹ್ಮಶ್ರಿ ನಾರಾಯಣಗುರು...

ಬಿಲ್ಲವ ಸಮುದಾಯದ ಯುವಕರು ಇನ್ನು ಮುಂದೆ ಕೋಮು ಗಲಾಟೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು‌ ಶಪಥ ಮಾಡಬೇಕು: ಬ್ರಹ್ಮಶ್ರಿ ನಾರಾಯಣಗುರು ಶಕ್ತಿಪೀಠದ‌ ಪ್ರಣವಾನಂದ ಸ್ವಾಮೀಜಿ ಹೇಳಿಕೆ

spot_img
- Advertisement -
- Advertisement -

ಸುಳ್ಯ: ಬಿಲ್ಲವ ಸಮುದಾಯದ ಯುವಕರು ಇನ್ನು ಮುಂದೆ ಕೋಮು ಗಲಾಟೆಯಲ್ಲಿ  ಪಾಲ್ಗೊಳ್ಳುವುದಿಲ್ಲವೆಂದು‌ ಶಪಥ ಮಾಡಬೇಕು ಎಂದು  ಬ್ರಹ್ಮಶ್ರಿ ನಾರಾಯಣಗುರು ಶಕ್ತಿಪೀಠದ‌ ಪ್ರಣವಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಗಂಟೆಯಲ್ಲಿ ಹಿಂದುಳಿದ‌ ಬಿಲ್ಲವ , ಈಡಿಗ ಸಮುದಾಯದ ಜನ ಸಾಯುತ್ತಿದ್ದಾರೆ.ಇದರಿಂದ‌ ನಮ್ಮ‌ ಸಮುದಾಯಕ್ಕೆ ನಷ್ಟವಾಗಿದೆ. ನಮಗೆ ಈ ಪರಿಸ್ಥಿತಿ ಬರಲು ನಮ್ಮ ಪ್ರಾಮಾಣಿಕತೆಯೇ ಕಾರಣ ಎಂದು ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಬಳಿಕ ಅವರು ಹೇಳಿಕೆ‌ ನೀಡಿದ್ದಾರೆ.

ನಾವು ನಂಬಿದ ಪಕ್ಷದಿಂದ ರಕ್ಷಣೆ  ಸಿಗುತ್ತಿಲ್ಲ.ಹಾಗಾಗಿ ಬಿಲ್ಲವ ಸಮುದಾಯದ ಯುವಕರು ಒಂದು ಶಪಥ ಮಾಡಬೇಕು. ಇನ್ನು ಮುಂದೆ ಕೋಮು ಗಲಾಟೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಯಾವುದೇ ಕೇಸ್ ಹಾಕಿಸಿಕೊಳ್ಳುವುದಿಲ್ಲವೆಂದು ಕರಾವಳಿಯಲ್ಲಿ ಬಿಲ್ಲವ ಸಮುದಾಯ ಶಪಥ ಮಾಡುವ ಎಂದಿದ್ದಾರೆ.

ಇಡೀ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು  ನಾನು ಪಾದಯಾತ್ರೆ ಮಾಡುತ್ತೇನೆ.ಮುಖ್ಯಮಂತ್ರಿಯವರಿಗೆ ನಾನು ಎಚ್ಚರಿಕೆ ಕೊಡುತ್ತೇನೆ.ಇನ್ನು ನಮ್ಮ‌ ಸಮುದಾಯ ಸುಮ್ಮನಿರುವುದಿಲ್ಲ ಎಂದಿದ್ದಾರೆ‌. ಪ್ರವೀಣ್ ಜೀವಕ್ಕೆ 25 ಲಕ್ಷದಲ್ಲಿ ಬೆಲೆ ಕಟ್ಟಬೇಡಿ.ನಿಮ್ಮ ಸಿದ್ದಾಂತಕ್ಕಾಗಿ ನಮ್ಮ‌‌ ಸಮುದಾಯದ ಯುವಕ ಬಲಿಯಾಗಿದ್ದಾನೆ.ಪ್ರವೀಣ್ ಕುಟುಂಬಕ್ಕೆ ಸರ್ಕಾರಿ ನೌಕರಿ, ಒಂದು ಕೋಟಿ ರೂ ಪರಿಹಾರ ನೀಡಬೇಕು.ನಮ್ಮ ಬೇಡಿಕೆಗಳನ್ನ ಈಡೇರಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು  ಪ್ರಣವಾನಂದ‌ ಸ್ವಾಮೀಜಿ  ಎಚ್ಚರಿಸಿದ್ದಾರೆ.

- Advertisement -
spot_img

Latest News

error: Content is protected !!