Friday, June 5, 2026
HomeUncategorizedಕಡಬ;ಶಿಕ್ಷಕ, ಜೆಸಿಐ ವಲಯ ತರಬೇತುದಾರ, ಖ್ಯಾತ ನಿರೂಪಕ ಪ್ರದೀಪ್ ಬಾಕಿಲ ನಿಧನ

ಕಡಬ;ಶಿಕ್ಷಕ, ಜೆಸಿಐ ವಲಯ ತರಬೇತುದಾರ, ಖ್ಯಾತ ನಿರೂಪಕ ಪ್ರದೀಪ್ ಬಾಕಿಲ ನಿಧನ

- Advertisement -
- Advertisement -

ಕಡಬ; ಜೆಸಿಐ ವಲಯ ತರಬೇತುದಾರ, ಖ್ಯಾತ ನಿರೂಪಕ,  ಕಡಬ ತಾಲೂಕಿನ ಗೋಳಿತೊಟ್ಟು ಶಾಂತಿನಗರ ಹಿರಿಯ ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಪ್ರದೀಪ್ ಬಾಕಿಲ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಜೆಸಿಐ ಪೂರ್ವ ವಲಯ ಉಪಾಧ್ಯಕ್ಷರಾಗಿ ಸತತ 25 ಗಂಟೆ ತರಬೇತಿ ನೀಡಿ ಇಂಡಿಯಾ ಬುಕ್ ಆಪ್ ರೆಕಾರ್ಡ್ ಪ್ರಶಸ್ತಿಗೆ ಭಾಗಿಯಾಗಿದ್ದರು. ಡಿ.5 ರಂದು ಪ್ರದೀಪ್ ಬಾಕಿಲ ಮನೆಯ ಅಂಗಳದಲ್ಲಿ ಕುಸಿದು ಬಿದ್ದಿದ್ದರು ಎನ್ನಲಾಗಿದೆ. ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.

- Advertisement -

Latest News

error: Content is protected !!