Thursday, May 9, 2024
Homeಉದ್ಯಮಕೋಳಿ ಮಾಂಸ, ಮೀನಿನ ದರ ಏರಿಕೆ; ಮೊಟ್ಟೆಯ ದರ ಇಳಿಕೆ!

ಕೋಳಿ ಮಾಂಸ, ಮೀನಿನ ದರ ಏರಿಕೆ; ಮೊಟ್ಟೆಯ ದರ ಇಳಿಕೆ!

spot_img
- Advertisement -
- Advertisement -

ಮಂಗಳೂರು: ಕೋಳಿಮಾಂಸ, ಮೀನಿನ ದರವೂ ಬರ, ಬಿಸಿಲ ಝಳದ ಕಾರಣಗಳಿಂದಾಗಿ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೆ ಕತ್ತರಿ ಬೀಳುವಂತಾಗಿದೆ.

ಕರಾವಳಿಯಲ್ಲಿ ಜಾತ್ರೆ, ಕೋಲ, ನೇಮ, ಅಗೇಲು-ತಂಬಿಲಗಳು ಜತೆಗೆ ಮದುವೆ, ಔತಣ ಕೂಟಗಳು, ಸೀಮಂತ, ಮೆಹಂದಿ ಹೀಗೆ ವಿವಿಧ ಕಾರ್ಯಕ್ರಮಗಳೂ ನಡೆಯುತ್ತಿದ್ದು, ಕೋಳಿಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಈಗಾಗಿ ಸಾಕಣೆ ಮತ್ತು ಇತರ ವೆಚ್ಚಗಳ ಏರಿಕೆಯಿಂದಾಗಿ ಕೋಳಿಮಾಂಸದ ದರ ಏರುತ್ತಲೇ ಇದೆ.

ಪ್ರಸ್ತುತ ದರ ಹೇಗಿದೆ?: ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ. ಇದೆ. ವಿದೌಟ್‌ ಸ್ಕಿನ್‌ ಮಾಂಸಕ್ಕೆ 265-270 ರೂ. ಇದೆ. ಸಜೀವ ಕೋಳಿ ಬ್ರಾಯ್ಲರ್‌ಗೆ ಕೆ.ಜಿ.ಗೆ 165-170 ರೂ. ಇದ್ದರೆ, ಟೈಸನ್‌ ಕೋಳಿ ಕೆ.ಜಿ.ಗೆ 185-190 ರೂ. ಇದೆ. ಒಂದು ವಾರದಿಂದ ಕೋಳಿ ಮಾಂಸದ ದರದಲ್ಲಿ ಏರಿಕೆಯಾಗುತ್ತಿದ್ದು, ಪ್ರತೀದಿನ ಅಥವಾ 2-3 ದಿನಗಳಿಗೆ 5-6 ರೂ. ವರೆಗೆ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

ಬೆಲೆ ಏರಿಕೆಗೆ ಕಾರಣವೇನು?: ಕೋಳಿಗಳ ಆಹಾರದಲ್ಲಿ ಬಳಕೆಯಾಗುವ ಸೋಯಾ, ಜೋಳ ಫಸಲು ಕಡಿಮೆಯಾಗಿದ್ದೆ ಇದಕ್ಕೆ ಮುಖ್ಯ ಕಾರಣ. ಪ್ರತೀ ಕೆ.ಜಿ. ಕೋಳಿ ಉತ್ಪಾದನೆಗೆ ತಗುಲುವ ವೆಚ್ಚವೂ 60-70 ರೂ.ಗಳಿಂದ 100 ರೂ. ವರೆಗೆ ಹೆಚ್ಚಳವಾಗಿದೆ. ನೀರಿನ ಕೊರತೆ ಹಾಗೂ ಬಿಸಿಲಿನ ಝಳಕ್ಕೆ ಶೇ. 20-25ರಷ್ಟು ಕೋಳಿ ಸಾಕಣೆ ಕೇಂದ್ರಗಳು ಮುಚ್ಚಿವೆ. ಸಾಗಾಟ ವೆಚ್ಚವೂ ಹೆಚ್ಚಾಗಿದೆ. ಬಿಸಿಲು ಕೂಡ ಹೆಚ್ಚಾಗುತ್ತಿರುವುದರಿಂದ ಕೋಳಿಗಳ ಬೆಳವಣಿಗೆಯ ಮೇಲೂ ಪರಿಣಾಮ ಉಂಟಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಮರಿಗಳು ಸಾವನ್ನಪ್ಪುತ್ತಿವೆ. ಇವೆಲ್ಲ ಕಾರಣದಿಂದ ಕೋಳಿ ಮಾಂಸದ ದರದಲ್ಲಿ ಏರಿಕೆಯಾಗುತ್ತಿದೆ ಎನ್ನುತ್ತಾರೆ ಸಾಕಣೆದಾರರು.

ಮೀನಿನ ದರವೂ ಏರಿಕೆ: ಬಹುತೇಕ ಬೋಟುಗಳು ಸಮುದ್ರಕ್ಕೆ ತೆರಳದೆ ಬಂದರಿನಲ್ಲೇ ಉಳಿದಿದ್ದು, ಕಡಲಿನಲ್ಲಿ ಮತ್ಸಕ್ಷಾಮ ಉಂಟಾಗಿರು ವುದೇ ಇದಕ್ಕೆ ಕಾರಣ. ಬೇಡಿಕೆಗೆ ತಕ್ಕಂತೆ ಮೀನು ದೊರೆಯದ ಪರಿಣಾಮ ಮೀನಿನ ದರದಲ್ಲಿಯೂ ಏರಿಕೆಯಾಗಿದೆ. ಬಹುತೇಕ ಎಲ್ಲ ಮೀನುಗಳ ದರ ಕೆ.ಜಿ.ಗೆ 200 ರೂ. ದಾಟಿದೆ. ಗೋವಾ, ಗುಜರಾತ್‌ ಸಹಿತ ಹೊರ ರಾಜ್ಯಗಳಿಂದ ಮೀನು ಬರುತ್ತಿದ್ದರೂ ಬೆಲೆ ಇಳಿಕೆಯಾಗಿಲ್ಲ.

- Advertisement -
spot_img

Latest News

error: Content is protected !!