Monday, April 29, 2024
Homeಕರಾವಳಿಟಿ.ಎ ಆಲಿಯಬ್ಬ ಜೋಕಟ್ಟೆ ಅವರ 'ಬ್ಯಾರಿ: ನಾನು ಕಂಡಂತೆ' ಕೃತಿ ಬಿಡುಗಡೆ

ಟಿ.ಎ ಆಲಿಯಬ್ಬ ಜೋಕಟ್ಟೆ ಅವರ ‘ಬ್ಯಾರಿ: ನಾನು ಕಂಡಂತೆ’ ಕೃತಿ ಬಿಡುಗಡೆ

spot_img
- Advertisement -
- Advertisement -

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ನಗರದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಶುಕ್ರವಾರದಂದು ಸಾಹಿತಿ ಟಿ.ಎ ಆಲಿಯಬ್ಬ ಜೋಕಟ್ಟೆ ಅವರ ‘ಬ್ಯಾರಿ: ನಾನು ಕಂಡಂತೆ’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮಂಗಳೂರು ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಅಬೂಬಕ್ಕರ್ ಸಿದ್ದೀಕ್, ‘ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗೆ ಸಂಬಂಧಿಸಿದಂತೆ ನಡೆಯುವ ಅಧ್ಯಯನ ತಳಸ್ಪರ್ಶಿಯಾದರೆ ಮಾತ್ರ ಬ್ಯಾರಿ ಕ್ಷೇತ್ರ ಕಾರ್ಯದ ವಿಸ್ತರಣೆ ಸಾಧ್ಯ,’ ಎಂದು ಹೇಳಿದರು.

ಬ್ಯಾರಿ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್‌ ಹನೀಫ್‌ ಅಧ್ಯಕ್ಷತೆ ವಹಿಸಿದ್ದರು. ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಇಸ್ಮಾಯಿಲ್ ಎನ್ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಕರ್ತ ಹಂಝ ಮಲಾ‌, ಕೃತಿ ಪರಿಚಯ ಮಾಡಿದರು.

ವಿದ್ಯಾರ್ಥಿಗಳಾದ ಮುಹಮ್ಮದ್ ಸ್ವಾದಿಕ್, ಆಯಿಶಾ ಝಹೀಮಾ, ಮುಹಮ್ಮದ್ ಸಿಮಕ್, ನೌಶೀನಾ ಅವರು ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ವಿಚಾರ ಮಂಡಿಸಿದರು. ವಿವಿ ಕಾಲೇಜಿನ ಪ್ರಾಂಶುಪಾಲೆ ಅನಸೂಯಾ ರೈ, ಬ್ಯಾರಿ ವಾರ್ತೆ ಸಂಪಾದಕ ಬಶೀರ್ ಬೈಕಂಪಾಡಿ, ಅಖಿಲ ಭಾರತ ಬ್ಯಾರಿ ಪರಿಷತ್‌ ಅಧ್ಯಕ್ಷ ಖಾಲಿದ್ ಉಜಿರೆ, ‘ಮೇಲೆನೆ’ ಅಧ್ಯಕ್ಷ ಅಶೀರುದ್ದೀನ್ ಸಾರ್ತಬೈಲ್‌, ಬ್ಯಾರಿ ಅಕಾಡೆಮಿ ರಿಜಿಸ್ಟ್ರಾರ್ ಆರ್. ಮನೋಹರ ಕಾಮತ್‌ ಮಾತನಾಡಿದರು.

- Advertisement -
spot_img

Latest News

error: Content is protected !!