Saturday, May 18, 2024
Homeಕರಾವಳಿಸುಳ್ಯ; ಬಾಲಕಿಗೆ ಲೈಂಗಿಕ ಕಿರುಕುಳ ; ಯುವಕನ ವಿರುದ್ಧ ಪ್ರಕರಣ ದಾಖಲು

ಸುಳ್ಯ; ಬಾಲಕಿಗೆ ಲೈಂಗಿಕ ಕಿರುಕುಳ ; ಯುವಕನ ವಿರುದ್ಧ ಪ್ರಕರಣ ದಾಖಲು

spot_img
- Advertisement -
- Advertisement -

ಸುಳ್ಯ; ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಯುವಕನೋರ್ವನ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಪುತ್ತೂರು ಗ್ರಾಮದ ಅರಿಯಡ್ಕ ನಿವಾಸಿ ಸಂದೀಪ (22) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಬಾಲಕಿಗೆ ಯುವಕ ದೂರದ ಸಂಬಂಧಿಯಾಗಿದ್ದು, ಅವರಿಬ್ಬರು ಕೆಲ ಸಮಯದಿಂದ ದೂರವಾಣಿ ಮೂಲಕ ಮಾತನಾಡುತ್ತಿದ್ದರೆಂದು. ಕೆಲ ತಿಂಗಳ ಹಿಂದೆ ಬಾಲಕಿಯ ದೊಡ್ಡಪ್ಪನ ಮನೆಯಲ್ಲಿ ಪೂಜೆಗೆ ಸಂದೀಪ ಹೋಗಿದ್ದು ರಾತ್ರಿ ವೇಳೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ನಂತರ ಬೆದರಿಕೆ ಹಾಕಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ. ಸಂದೀಪ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!