Saturday, October 17, 2026
Homeಕರಾವಳಿಉಡುಪಿಉಡುಪಿ: ಬಸ್ ನಿಲ್ದಾಣದಲ್ಲಿ‌ ಕುಸಿದು ಬಿದ್ದು ಬ್ಯಾಂಕ್ ಮಹಿಳಾ ಸಿಬ್ಬಂದಿ ಸಾವು

ಉಡುಪಿ: ಬಸ್ ನಿಲ್ದಾಣದಲ್ಲಿ‌ ಕುಸಿದು ಬಿದ್ದು ಬ್ಯಾಂಕ್ ಮಹಿಳಾ ಸಿಬ್ಬಂದಿ ಸಾವು

- Advertisement -
- Advertisement -

ಉಡುಪಿ: ಬಸ್ ನಿಲ್ದಾಣದಲ್ಲಿ‌ ಕುಸಿದು ಬಿದ್ದು ಬ್ಯಾಂಕ್ ಮಹಿಳಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಉಡುಪಿಯ ಉದ್ಯಾವರ ಬಸ್ ನಿಲ್ದಾಣದಲ್ಲಿ‌ ನಡೆದಿದೆ.

ಉದ್ಯಾವರ ಗುಡ್ಡೆಯಂಗಡಿ ನಿವಾಸಿ ವಸಂತಿ (55) ಮೃತ ಮಹಿಳೆ. ಇವರು ಕಟ್ಟಿಂಗೇರಿ ಯೂನಿಯನ್‌ ಬ್ಯಾಂಕ್‌ನ ಸಿಬ್ಬಂದಿ.

ವಸಂತಿ ಬೆಳಗ್ಗೆ 8.30ಕ್ಕೆ ಬ್ಯಾಂಕ್‌ಗೆ ಹೋಗಲು ಉದ್ಯಾವರದ ಗುಡ್ಡೆಯಂಗಡಿ ಬಸ್‌ ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಿದ್ದಾಗ ಕುಸಿದು ಬಿದ್ದಿದ್ದರು. ಸ್ಥಳೀಯರು ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

- Advertisement -

Latest News

error: Content is protected !!