Saturday, June 27, 2026
Homeಅಪರಾಧಕಡಿರುದ್ಯಾವರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್: ಹಲ್ಲೆಗೊಳಗಾದ ವ್ಯಕ್ತಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ...

ಕಡಿರುದ್ಯಾವರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್: ಹಲ್ಲೆಗೊಳಗಾದ ವ್ಯಕ್ತಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ:  ಇಲ್ಲಿ ಕೊಂಬರೋಡಿ ನಿವಾಸಿ ಬಾಬಿ ಎಂಬ ವ್ಯಕ್ತಿಯ ಮೇಲೆ 10 ರಿಂದ 15 ಜನರ ತಂಡ ಹಲ್ಲೆ ನಡೆಸಿದ ಪ್ರಕರಣಕ್ಕೆ  ಟ್ವಿಸ್ಟ್ ಸಿಕ್ಕಿದೆ. ಹಲ್ಲೆಗೊಳಗಾದ ಬಾಬಿ(45) ವಿರುದ್ಧ ಇದೀಗ ಆತನೊಂದಿಗೆ ಬೈಕ್ ನಲ್ಲಿ ತೆರಳಿದ್ದ  ಬಾಲಕಿಯೇ ಪೋಕ್ಸೋ ಕಾಯ್ದೆಯಡಿ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಆರೋಪಿ ಬಾಬಿ 19.12.2021 ರಂದು ತನ್ನನ್ನು ಸೋಮಂತಡ್ಕ ಪೇಟೆಗೆ ಕರೆದುಕೊಂಡು ಹೋಗಿ ಮರಳಿ ಮನೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ಸುಮಾರು 8-30ರ ವೇಳೆಗೆ ಕಡಿರುದ್ಯಾವರ ಗ್ರಾಮದ ಎರ್ಮಳಪಲ್ಕೆ ಮಠ ಎಂಬಲ್ಲಿ ಆತ ಹೊಸದಾಗಿ ಕಟ್ಟಿಸಿದ ವಾಸವಿಲ್ಲದ ಮನೆಗೆ ಕರೆದುಕೊಂಡು ಹೋಗಿ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು  ಸಂತ್ರಸ್ಥೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಅಲ್ಲದೆ ಆರೋಪಿ ಬಾಬಿ ಇದೇ ರೀತಿ  3-4 ಬಾರಿ ರಾತ್ರಿ ಸಮಯ ಬೈಕಿನಲ್ಲಿ ಅದೇ ಮನೆಗೆ ಕರೆದುಕೊಂಡು ಹೋಗಿ ಕೊನೆಯದಾಗಿ ದಿನಾಂಕ 26.02.2022 ರಂದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ನೀಡಿದ್ದಾಳೆ. ಸಂತ್ರಸ್ಥ ಬಾಲಕಿ ನೀಡಿದ ದೂರಿನಂತೆ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಸದ್ಯ ಪೊಕ್ಸೋ ಆರೋಪಿ, ಹಲ್ಲೆಗೊಳಗಾದ ಕೇಸ್ ನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

- Advertisement -

Latest News

error: Content is protected !!