Friday, April 26, 2024
Homeಕರಾವಳಿಪೆರ್ನೆ ವಲಯದ ಪೂಜಾಶ್ರೀ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ

ಪೆರ್ನೆ ವಲಯದ ಪೂಜಾಶ್ರೀ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ

spot_img
- Advertisement -
- Advertisement -

ಪೆರ್ನೆ;  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್( ರಿ) ವಿಟ್ಲ ಇದರ ಕಾರ್ಯಕ್ಷೇತ್ರ ವ್ಯಾಪ್ತಿಯ  ಪೆರ್ನೆ ವಲಯದ ಪೂಜಾಶ್ರೀ  ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಗ್ರಾಮ ಅಭಿವೃದ್ಧಿ ಯೋಜನೆಯ ಪೆರ್ನೆ ವಲಯ ಅಧ್ಯಕ್ಷರಾದ ರಾಬರ್ಟ್ ಫರ್ನಾಂಡೀಸ್ ರವರ ಅಧ್ಯಕ್ಷತೆಯಲ್ಲಿ ಶ್ರೀ ರಾಮಚಂದ್ರ ಪದವಿ ಪೂರ್ವ  ವಿದ್ಯಾಲಯ  ಪೆರ್ನೆ ಇಲ್ಲಿ ಜರಗಿತು.  ಕಾರ್ಯಕ್ರಮವನ್ನು  ಪೆರ್ನೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ನವೀನ್ ಕುಮಾರ್ ಪದಬರಿ  ಉದ್ಘಾಟಿಸಿದರು.

  ಮುಖ್ಯ ಅತಿಥಿಗಳಾಗಿ ಆಗಮಿಸಿದ ಅನನ್ಯ ಲಕ್ಷ್ಮಿ ಭಟ್ ವೈದ್ಯಕೀಯ ಅಧೀಕ್ಷಕರು ಕಕ್ಕಿಂಜೆ ಇವರು ಜ್ಞಾನ ವಿಕಾಸ ಕಾರ್ಯಕ್ರಮವು ಯೂಟ್ಯೂಬ್ ಚಾನೆಲ್ ಮೂಲಕ ಮಹಿಳೆಯರಿಗೆ ಹಲವಾರು ಮಾಹಿತಿ ಗಳನ್ನು ನೀಡುತ್ತಿದೆ. ಆದರೆ ಗ್ರಾಮೀಣಾ ಭಾಗದಲ್ಲಿ ಪ್ರತೀ ತಿಂಗಳು ಜ್ಞಾನ ವಿಕಾಸ ಕಾರ್ಯಕ್ರಮ ಆಯೋಜನೆ ಮಾಡಿ ಮಹಿಳೆಯರಲ್ಲಿ  ಉತ್ತಮವಾದ ಬದಲಾವಣೆ ಮಾಡಿ  ವೇದಿಕೆಯಲ್ಲಿ ಧೈರ್ಯದಿಂದ ಮಾತನಾಡುವ ಕಲೆ , ಸಭಾ ಕಾರ್ಯಕ್ರಮಕ್ಕೆ ಬೇಕಾದ ಪುಷ್ಪಗುಚ್ಛ ತಯಾರಿಯಲ್ಲಿ ಸದಸ್ಯರ ಕೌಶಲ್ಯ ವನ್ನು ಹತ್ತಿರದಿಂದ ನೋಡಿ ಈ ಕಾರ್ಯಕ್ರಮದ ಬಗ್ಗೆ ಗೌರವ ಹೆಚ್ಚಾಯಿತು ಎಂಬ ಮಾತಿನೊಂದಿಗೆ, ನಮ್ಮ ಮಾನಸಿಕ ಆರೋಗ್ಯ ವನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಸವಿ ವಿವರವಾದ ಮಾಹಿತಿ ನೀಡಿದರು.

 ಕಾರ್ಯಕ್ರಮದಲ್ಲಿ ಮಾಣಿ  ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ವೀಣಾ , ಪೆರ್ನೆ ಪಂಚಾಯತ್ ಅಧ್ಯಕ್ಷರಾದ ಸುನೀಲ್ ನೆಲ್ಸನ್ ಪಿಂಟೋ, ಗ್ರಾಮ ಅಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ , ಒಕ್ಕೂಟದ ಅಧ್ಯಕ್ಷರಾದ ಯಶೋಧ ,ಕೇಂದ್ರದ ಸದಸ್ಯರಾದ ಸೀತಮ್ಮ ರವರು ವೇದಿಕೆ ಯಲ್ಲಿ ಉಪಸ್ಥಿತಿ ಇದ್ದರು. ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ ಸ್ವಾಗತಿಸಿ , ಜಯಶ್ರೀ ವರದಿ ಮಂಡನೆ ಮಾಡಿದರು ಸೇವಾ ಪ್ರತಿನಿಧಿ ಪುರುಷೋತ್ತಮ್  ಬಹುಮಾನ ಪಟ್ಟಿ ವಾಚಿಸಿ ಸೇವಾ ಪ್ರತಿನಿಧಿ ಶಶಿಕಲಾ ವಂದಿಸಿದರು.  ವಲಯ ಮೇಲ್ವಿಚಾರಕಿ  ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.

  ಕಾರ್ಯಕ್ರಮದಲ್ಲಿ ವಲಯದ ಸೇವಾ ಪ್ರತಿನಿಧಿಗಳು,  ಒಕ್ಕೂಟದ ಪದಾಧಿಕಾರಿಗಳು , ಗ್ರಾಮ ಪಂಚಾಯತ್ ಸದಸ್ಯರು ಒಕ್ಕೂಟ ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಭಾಗವಹಿಸಿದ್ದರು.ಕೇಂದ್ರದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಇದರಲ್ಲಿ ವಿಜೇತರಾದ  ಸದಸ್ಯರಿಗೆ ಬಹುಮಾನ ವಿತರಣೆ ಹಾಗೂ ಕೇಂದ್ರದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು .

- Advertisement -
spot_img

Latest News

error: Content is protected !!