- Advertisement -
- Advertisement -
ನವದೆಹಲಿ: ಈ ಹಿಂದೆ ಜನವರಿ 17 ರಂದು ದೇಶಾದ್ಯಂತ ಪೋಲಿಯೊ ಲಸಿಕೆ ಹಾಕಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಅದನ್ನು ಬದಲಾಯಿಸಿ ಈಗ ಪೋಲಿಯೊ ರೋಗ ನಿರೋಧಕ ಲಸಿಕೆ ಹಾಕುವ ರಾಷ್ಟ್ರೀಯ ಕಾರ್ಯಕ್ರಮವನ್ನು ಮರು ನಿಗದಿ ಮಾಡಲಾಗಿದೆ. ಜನವರಿ 31 ರಂದು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗುವುದು.
ವಿಶ್ವದಲ್ಲಿಯೇ ಅತಿ ದೊಡ್ಡದಾದ ಕೊರೋನಾ ವ್ಯಾಕ್ಸಿನೇಷನ್ ನೀಡಿಕೆ ಕಾರ್ಯ ಜನವರಿ 16 ರಿಂದ ದೇಶಾದ್ಯಂತ ನಡೆಯಲಿರುವ ಹಿನ್ನೆಲೆಯಲ್ಲಿ ಜನವರಿ 17 ರ ಪೋಲಿಯೊ ಲಸಿಕೆ ಕಾರ್ಯ ಮುಂದೂಡಲಾಗಿದೆ. ಪೋಲಿಯೋ ಲಸಿಕೆ ಮಕ್ಕಳಿಗೆ ಬಹಳ ಪ್ರಮುಖವಾಗಿದ್ದು ಜನವರಿ 31 ರಂದು ಪೋಷಕರು ಮಕ್ಕಳಿಗೆ ತಪ್ಪದೆ ಪೋಲಿಯೋ ನೀಡಬೇಕಿದೆ.
- Advertisement -