Friday, June 5, 2026
Homeಅಪರಾಧ25,000/- ಮೌಲ್ಯದ ಅಡಿಕೆ ಕದ್ದ ಕಳ್ಳನ ಬಂಧನ..!

25,000/- ಮೌಲ್ಯದ ಅಡಿಕೆ ಕದ್ದ ಕಳ್ಳನ ಬಂಧನ..!

- Advertisement -
- Advertisement -

ಕಾರ್ಕಳ: ಕುಂಟಾಡಿಯ ರಮೇಶ್ ಅಮೀನ್ ಎಂಬುವವರ ತೋಟದಲ್ಲಿ ಅಡಿಕೆಯನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ಖದೀಮ ಸಿಕ್ಕಿಬಿದ್ದಿದ್ದಾನೆ. 25 ಸಾವಿರ ರೂಪಾಯಿ ಮೌಲ್ಯದ ಅಡಿಕೆಯನ್ನು ಇವರ ತೋಟದಲ್ಲಿ ಕದ್ದು ಸಾಗಾಟ ಮಾಡುತ್ತಿದ್ದ. ಈತನನ್ನು ನಿಟ್ಟೆ ಅಂಬಡೆಕಲ್ಲಿನ ಕಾರ್ತಿಕ್(21) ಎಂದು ಗುರುತಿಸಿದ್ದಾರೆ. ಈತ ಒಬ್ಬ ಆಟೋ ಚಾಲಕ.

ಈಗಾಗಲೇ ಆರೋಪಿಯನ್ನು ಗ್ರಾಮಾಂತರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತೋಟದಿಂದ ಕಾರ್ತಿಕ್ ಜೊತೆಗೆ ಸನೋಜ್ ಹಾಗೂ ಇನ್ನೊಬ್ಬ ಸೇರಿದಂತೆ ಮೂವರು ಅಡಿಕೆ ಕಳವು ಮಾಡಿದ್ದರು. ಆಟೋ ಮೂಲಕ ಬಂದು ತೋಟದಲ್ಲಿ ಕಳವು ಮಾಡಿ ಹೋಗಿದ್ದರು.

ಬಂಧಿತ ಆರೋಪಿಯಿಂದ ಸುಮಾರು 25 ಸಾವಿರ ಮೌಲ್ಯದ ಅಡಿಕೆಯ ಹಾಗೂ ಈ ಕೃತ್ಯಕ್ಕೆ ಬಳಸಲಾಗಿದ್ದ ರಿಕ್ಷಾವನ್ನು ವಶಪಡಿಸಲಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!