Thursday, June 4, 2026
Homeತಾಜಾ ಸುದ್ದಿತನ್ನದಲ್ಲ ಪರೀಕ್ಷಾ ಕೇಂದ್ರಕ್ಕೆ ತಪ್ಪಾಗಿ ಹೋಗಿ ಆತಂಕದಲ್ಲಿದ್ದ ವಿದ್ಯಾರ್ಥಿನಿ; ಆಕೆಯ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ ಪೊಲೀಸ್...

ತನ್ನದಲ್ಲ ಪರೀಕ್ಷಾ ಕೇಂದ್ರಕ್ಕೆ ತಪ್ಪಾಗಿ ಹೋಗಿ ಆತಂಕದಲ್ಲಿದ್ದ ವಿದ್ಯಾರ್ಥಿನಿ; ಆಕೆಯ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ ಪೊಲೀಸ್ ಅಧಿಕಾರಿ

- Advertisement -
- Advertisement -

ಗುಜರಾತ್ ಇಲ್ಲಿನ ಅಹಮದಾಬಾದ್‌ನಲ್ಲಿ ತಂದೆಯೊಬ್ಬರು ಕೆಲಸಕ್ಕೆ ಹೋಗುವ ಒತ್ತಡದಲ್ಲಿ ಮಗಳನ್ನು ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ಬಾಲಕಿ ತನ್ನ ರೋಲ್ ನಂಬರ್ ಗಾಗಿ ಎಷ್ಟೇ ಹುಡುಕಾಡಿದರೂ ಪ್ರಯೋಜನವಾಗಿಲ್ಲ. ಜೊತೆಗೆ ಬಾಲಕಿಗೆ ತನಗೆ ನಿಗದಿಪಡಿಸಿದ ಪರೀಕ್ಷಾ ಕೇಂದ್ರ ಇದಲ್ಲ ಎಂಬುವುದು ಗೊತ್ತಾಗಿದೆ.ಇದರಿಂದ ಗಲಿಬಿಲಿಗೊಂಡ ವಿದ್ಯಾರ್ಥಿನಿಯನ್ನು ಗಮನಿಸಿದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಆಕೆಯ ಬಳಿ ಬಂದು ಏನಾಯಿತೆಂದು ವಿಚಾರಿಸಿದ್ದಾರೆ.

ಈ ವೇಳೆ ವಿದ್ಯಾರ್ಥಿನಿ ಎಕ್ಸಾಂ ಸೆಂಟರ್ ತಪ್ಪಿದ್ದಾಗಿ ತಿಳಿಸಿದ್ದಾಳೆ.ಅಧಿಕಾರಿಯು ಆಕೆಯ ಹಾಲ್ ಟಿಕೆಟ್ ಪರಿಶೀಲಿಸಿದ್ದಾರೆ.ಪರೀಕ್ಷೆಗೆ ಕೆಲವೇ ನಿಮಿಷಗಳು ಮಾತ್ರ ಬಾಕಿ ಇತ್ತು.ಆದರೆ ಟಿಕೆಟ್‌ನಲ್ಲಿ ನಮೂದಿಸಲಾದ ಕೇಂದ್ರವು 20 ಕಿಮೀ ದೂರದಲ್ಲಿತ್ತು.

ಬಾಲಕಿಯನ್ನು ಪೊಲೀಸ್ ವಾಹನದಲ್ಲಿ ಕೂರಿಸಿದ ಪೊಲೀಸ್ ಅಧಿಕಾರಿ ಕಾರಿನಲ್ಲಿ ಲೈಟ್ ಆನ್ ಮಾಡಿ ಸೈರನ್ ಕೂಡಾ ಹಾಕಿ ಬಾಲಕಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ್ದಾರೆ.ಬಾಲಕಿಯ ಒಂದು ವರ್ಷ ಹಾಳಾಗದಂತೆ ನೋಡಿಕೊಂಡಿದ್ದಾರೆ‌.ಪೊಲೀಸ್ ಅಧಿಕಾರಿಯ ಈ ಕೆಲಸಕ್ಕೆ ವ್ಯಾಪಕ‌ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Latest News

error: Content is protected !!