Thursday, June 25, 2026
Homeಕರಾವಳಿಬೆಳ್ತಂಗಡಿ : ಹತ್ಯಡ್ಕದಲ್ಲಿ ಧರ್ಮಸ್ಥಳ ಪೊಲೀಸರಿಂದ SC&ST ಕುಂದು ಕೊರತೆ ಆಲಿಸುವ ಕಾರ್ಯಗಾರ ಹಾಗೂ ಮಾಹಿತಿ‌...

ಬೆಳ್ತಂಗಡಿ : ಹತ್ಯಡ್ಕದಲ್ಲಿ ಧರ್ಮಸ್ಥಳ ಪೊಲೀಸರಿಂದ SC&ST ಕುಂದು ಕೊರತೆ ಆಲಿಸುವ ಕಾರ್ಯಗಾರ ಹಾಗೂ ಮಾಹಿತಿ‌ ಕಾರ್ಯಕ್ರಮ

- Advertisement -
- Advertisement -

ಬೆಳ್ತಂಗಡಿ : ಎಸ್ಸಿ &ಎಸ್ಟಿ ಕುಂದುಕೊರತೆಗಳ ಆಲಿಸುವ ಸಭೆ ಹಾಗೂ ಮಾಹಿತಿ ಕಾರ್ಯಗಾರವು ಧರ್ಮಸ್ಥಳ ಪೊಲೀಸ್ ಠಾಣಾ ವತಿಯಿಂದ ಭಾನುವಾರ ಬೆಳ್ತಂಗಡಿಯ ಮುದ್ದಿಗೆಯಲ್ಲಿ ನಡೆಯಿತು.

ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ತುಂಬೆತ್ತಡ್ಕ ಮುದ್ದಿಗೆಯಲ್ಲಿರುವ ರಾಣಿಯಾರ್ ಸಭಾಭವನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆ ವತಿಯಿಂದ ಸಂಜೀವಿನಿ ಶಾಲೆ ಮತ್ತು ನವಶಕ್ತಿ ಯುವಕ ಸಂಘ ತುಂಬೆತ್ತಡ್ಕ ಸಹಯೋಗದಲ್ಲಿ ಭಾನುವಾರ (ಇಂದು) ಕಾರ್ಯಗಾರವು ನಡೆಯಿತು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಧರ್ಮಸ್ಥಳ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಅನಿಲ್‌ ಕುಮಾರ್ ಡಿ ಅವರು ವಹಿಸಿಕೊಂಡು  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಗಳ ಬಗ್ಗೆ ಮತ್ತು ಪೋಕ್ಸೋ ಕಾಯ್ದೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಗಳನ್ನು ನೀಡಿದರು‌.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮತ್ತು ನವಶಕ್ತಿ ಯುವಕ ಸಂಘದ ಪದಾಧಿಕಾರಿಯಾದ ಪ್ರೇಮಚಂದ್ರ, ಹತ್ಯಡ್ಕ ಗ್ರಾಮದ ಬೀಟ್ ಪೊಲೀಸ್ ಪ್ರವೀಣ್, ನಿವೃತ್ತ ಎಎಸ್ಐ ಕೆ.ಎಸ್.ಬಾಬು ಮತ್ತು ಗ್ರಾಮದ ಮುಖಂಡರು ಹಾಗೂ ಊರವರು ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾದ ರಾಜಾರಾಮ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -

Latest News

error: Content is protected !!