Saturday, May 18, 2024
Homeಕರಾವಳಿಮಂಗಳೂರು: ಪಬ್ ನಲ್ಲಿ ಪಾರ್ಟಿಯಲ್ಲಿ ಭಾಗಿಯಾಗಿದ್ದ 18 ವಿದ್ಯಾರ್ಥಿಗಳ ಗುರುತು ಪತ್ತೆಯಾಗಿದೆ: ಮಂಗಳೂರು ನಗರ ಪೊಲೀಸ್...

ಮಂಗಳೂರು: ಪಬ್ ನಲ್ಲಿ ಪಾರ್ಟಿಯಲ್ಲಿ ಭಾಗಿಯಾಗಿದ್ದ 18 ವಿದ್ಯಾರ್ಥಿಗಳ ಗುರುತು ಪತ್ತೆಯಾಗಿದೆ: ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿಕೆ

spot_img
- Advertisement -
- Advertisement -

ಮಂಗಳೂರು: ನಗರದ ಪಬ್‌ನಲ್ಲಿ  ಪಾರ್ಟಿಯಲ್ಲಿ ಪಾಲ್ಗೊಂಡ ಕಾಲೇಜೊಂದರ 30 ವಿದ್ಯಾರ್ಥಿಗಳ ಪೈಕಿ 18 ಮಂದಿಯ ಗುರುತು ಪತ್ತೆ ಹಚ್ಚಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.

ಈ 18 ಮಂದಿಯ ಪೈಕಿ 8 ಮಂದಿ 21 ವರ್ಷ ವಯಸ್ಸಿಗಿಂತ ಕೆಳಗಿನವರಾಗಿದ್ದಾರೆ. ಅಬಕಾರಿ ಕಾಯ್ದೆಯ ಪ್ರಕಾರ 21 ವರ್ಷ ವಯಸ್ಸಿನ ಕೆಳಗಿನವರಿಗೆ ಬಾರ್‌ಗಳಲ್ಲಿ ಅಮಲು ದ್ರವ್ಯಗಳನ್ನು ಪೂರೈಕೆ ಮಾಡುವಂತಿಲ್ಲ. ಹಾಗಾಗಿ 8 ಮಂದಿಗೆ ಅಮಲು ದ್ರವ್ಯಗಳನ್ನು ನೀಡಲಾಗಿದೆಯೇ ಇಲ್ಲವೇ ಎಂಬುದರ ಬಗ್ಗೆ ಅಬಕಾರಿ ಇಲಾಖೆಯವರು ತನಿಖೆ ನಡೆಸಬೇಕಿದೆ. ಈ 8 ಮಂದಿ ವಿದ್ಯಾರ್ಥಿಗಳ ಬಗ್ಗೆ ಅಬಕಾರಿ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅವರ ತನಿಖಾ ವರದಿಯಲ್ಲಿ ಮದ್ಯ ಪೂರೈಸಿರುವುದು ಸಾಬೀತಾದರೆ ಪಬ್‌ನ್ನು 10 ದಿನದ ಮಟ್ಟಿಗೆ ಮುಚ್ಚುವ ಅಧಿಕಾರ ಪೊಲೀಸ್ ಇಲಾಖೆಗೆ ಇದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!