Saturday, June 13, 2026
Homeತಾಜಾ ಸುದ್ದಿಪೊಲೀಸರಿಂದ ಹೀನ ಕೃತ್ಯ: ಹಾಸ್ಟೆಲ್ ಗೆ ನುಗ್ಗಿ ಹುಡುಗಿಯರ ಬಟ್ಟೆ ಬಿಚ್ಚಿಸಿ ಕುಣಿಸಿದ ಖಾಕಿಗಳು

ಪೊಲೀಸರಿಂದ ಹೀನ ಕೃತ್ಯ: ಹಾಸ್ಟೆಲ್ ಗೆ ನುಗ್ಗಿ ಹುಡುಗಿಯರ ಬಟ್ಟೆ ಬಿಚ್ಚಿಸಿ ಕುಣಿಸಿದ ಖಾಕಿಗಳು

- Advertisement -
- Advertisement -

ಮುಂಬೈ: ಹಾಸ್ಟೆಲ್​ಗೆ ನುಗ್ಗಿದ ಪೊಲೀಸರು ಬಾಲಕಿಯರ ಬಟ್ಟೆ ಬಿಚ್ಚಿಸಿ ಬಲವಂತದಿಂದ ನೃತ್ಯ ಮಾಡಿಸಿರುವ ಹೀನ ಕೃತ್ಯ ಮಹಾರಾಷ್ಟ್ರದ ಜಲಗಾಂವ್​ನಲ್ಲಿ ನಡೆದಿದೆ.

ಬಾಲಕಿಯರ ವಸತಿಗೃಹಕ್ಕೆ ತೆರಳಿದ್ದ ಪೊಲೀಸರು ಇಂಥದ್ದೊಂದು ಕೃತ್ಯ ಎಸಗಿದ್ದು, ಅದರ ವಿಡಿಯೋ ಮಾಡಿದ್ದಾರೆ.ಜಲಗಾಂವ್​ನ ವಸತಿಗೃಹದಲ್ಲಿರುವ ಕೆಲವು ಹುಡುಗಿಯರ ತನಿಖೆಯ ನೆಪದಲ್ಲಿ ಹೊರಗಿನ ಜನರು ಮತ್ತು ಪೊಲೀಸರಿಗೆ ಹಾಸ್ಟೆಲ್ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಹೀಗಾಗಿ ಹಾಸ್ಟೆಲ್​ಗೆ ಬಂದ ಪೊಲೀಸರು ಬಲವಂತವಾಗಿ ಕೆಲವು ಹುಡುಗಿಯರ ಬಟ್ಟೆ ಬಿಚ್ಚಿಸಿದ್ದಾರೆ ಮತ್ತು ನೃತ್ಯ ಮಾಡಲು ಒತ್ತಾಯಿಸಲಾಗಿದೆ ಎನ್ನಲಾಗಿದ್ದು, ಇದರ ವಿಡಿಯೊ ಕ್ಲಿಪ್ ಸಹ ಬಹಿರಂಗವಾಗಿದೆ.

ಇನ್ನು ಇದು ಮಹಾರಾಷ್ಟ್ರ ಸರ್ಕಾರವನ್ನೇ ಅಲ್ಲಾಡಿಸುವ ಮಟ್ಟಿಗೆ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಗೆ ಬೆದರಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ, ನಾಲ್ಕು ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿದೆ. ಈ ಕುರಿತು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ತಿಳಿಸಿದ್ದಾರೆ.

- Advertisement -

Latest News

error: Content is protected !!