Saturday, June 6, 2026
Homeಕರಾವಳಿಮಂಗಳೂರುಮಂಗಳೂರು: 2 ದಿನ ಕಳೆದರೂ ಸಿಕ್ಕಿಲ್ಲ ನಾಪತ್ತೆಯಾದ ವಿದ್ಯಾರ್ಥಿಯ ಸುಳಿವು; ಘಟನೆಯ ಹಿಂದಿದ್ಯಾ ಗಾಂಜಾ ವ್ಯಸನಿಗಳ...

ಮಂಗಳೂರು: 2 ದಿನ ಕಳೆದರೂ ಸಿಕ್ಕಿಲ್ಲ ನಾಪತ್ತೆಯಾದ ವಿದ್ಯಾರ್ಥಿಯ ಸುಳಿವು; ಘಟನೆಯ ಹಿಂದಿದ್ಯಾ ಗಾಂಜಾ ವ್ಯಸನಿಗಳ ಕೈವಾಡ

- Advertisement -
- Advertisement -

ಮಂಗಳೂರು: ಫರಂಗಿಪೇಟೆಯ ಪಿಯುಸಿ ವಿದ್ಯಾರ್ಥಿ ದಿಗಂತ್  ನಾಪತ್ತೆಯಾಗಿ 2 ದಿನ ಕಳೆದರೂ ಇನ್ನೂ ಕೂಡ ನಾಪತ್ತೆಯಾದ ವಿದ್ಯಾರ್ಥಿಯ ಸುಳಿವು ಸಿಕ್ಕಿಲ್ಲ. ಈ ಪ್ರಕರಣದ ಹಿಂದೆ ಗಾಂಜಾ ವ್ಯಸನಿಗಳ ಕೈವಾಡ ಇರುವ ಶಂಕೆಯಿದೆ ಎಂದು ವಿಶ್ವ ಹಿಂದೂ ಪರಿಷದ್ ಅನುಮಾನ ವ್ಯಕ್ತಪಡಿಸಿದೆ.


ಫರಂಗಿಪೇಟೆಯ ಸುತ್ತಮುತ್ತ ಡ್ರಗ್ಸ್, ಗಾಂಜಾ ವ್ಯಸನಿಗಳ ಒಂದು ದೊಡ್ಡ ತಂಡ ಇದೆ ಎಂಬುದು ಅಲ್ಲಿಯ ಅಕ್ಕಪಕ್ಕದ ಜನ ಮಾತನಾಡುತ್ತಿದ್ದಾರೆ. ಆದ್ದರಿಂದ ಈ ನಾಪತ್ತೆಯ ಹಿಂದೆ ಹಲವು ಸಂಶಯಗಳು ವ್ಯಕ್ತವಾಗುತ್ತಿದ್ದು ಇದರ ಹಿಂದೆ ಗಾಂಜಾ ವ್ಯಸನಿಗಳ ತಂಡದ ಕೈವಾಡ ಇರಬಹುದು ಎಂಬುದು ಸಂಶಯ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿ ನಾಪತ್ತೆಯಾದ ಸಮಯದಲ್ಲಿ ಅಪರಿಚಿತ ಕ್ವಾಲಿಸ್ ಕಾರು ಆ ಜಾಗದಲ್ಲಿ ಓಡಾಡಿದ್ದು ಆಂಜನೇಯ ದೇವಸ್ಥಾನದ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಈ ಹಿನ್ನಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೋಲೀಸ್ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಿ ನಾಪತ್ತೆಯಾದವನನ್ನು ಶೀಘ್ರವಾಗಿ ಪತ್ತೆಹಚ್ಚಲು ವಿಶ್ವ ಹಿಂದೂ ಪರಿಷದ್ ಆಗ್ರಹಿಸಿದೆ.

ದೇವಸ್ಥಾನಕ್ಕೆಂದು ಹೊರಟವನು ಮನೆಗೆ ಹಿಂದಿರುಗದಿರುವುದರಿಂದ ಮನೆಯವರೆಲ್ಲರೂ ಗಾಬರಿಗೊಂಡಿದ್ದಾರೆ. ಅವರ ಮನೆಗೆ ಹೋಗಿ ತಂದೆ ತಾಯಿ ಕುಟುಂಬದವರಿಗೆ ಧೈರ್ಯ ತುಂಬಲಾಗಿದೆ ಎಂದು ಶರಣ್ ಪಂಪವೆಲ್ ತಿಳಿಸಿದ್ದಾರೆ.

- Advertisement -

Latest News

error: Content is protected !!