ಬೆಂಗಳೂರು: ಅನೇಕಲ್ ಹೊರವಲಯದಲ್ಲಿ ಮಧ್ಯರಾತ್ರಿ ರೇವ್ ಪಾರ್ಟಿ ನಡೆದಿದ್ದು ಪೊಲೀಸರು ದಾಳಿ 11 ಜನರನ್ನುಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆನೇಕಲ್ ಹೊರವಲಯದ ಖಾಸಗಿ ರೆಸಾರ್ಟ್ ಒಂದರ ನಿರ್ಜನ ಪ್ರದೇಶದಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದು, ಅರ್ಧಂಬಂರ್ಧ ಬಟ್ಟೆ ಹಾಕಿರುವ ಯುವಕ-ಯುವತಿಯರು ನಶೆಯಲ್ಲಿ ತೇಲಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ತಿಳಿದು ಮಧ್ಯರಾತ್ರಿಯೇ ಆನೇಕಲ್ ಪೊಲೀಸರು ದಾಳಿ ಮಾಡಿದ್ದು, ಅನೇಕರನ್ನು ವಶಕ್ಕೆ ಪಡೆದಿದ್ದಾರೆ.
ಡ್ರಗ್ಸ್ ನಶೆಯಲ್ಲಿ ತೇಲುತ್ತಿದ್ದ ಯುವಕ, ಯುವತಿಯರು ಪೊಲೀಸರು ದಾಳಿ ಮಾಡುತ್ತಿದ್ದಂತೆ ಪರಾರಿಯಾಗಿದ್ದು, ಎದ್ದುಬಿದ್ದು ಓಡಿಹೋಗಿದ್ದಾರೆ. ಈ ಪೈಕಿ ಸದ್ಯ ಡ್ರಗ್ಸ್ ನಶೆಯಲ್ಲಿದ್ದ 11 ಜನರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ರೇವ್ ಪಾರ್ಟಿಯಲ್ಲಿ ಗಾಂಜಾ, ಮರಿಜುವಾನ ಸೇರಿದಂತೆ ವಿವಿಧ ಡ್ರಗ್ಸ್ಗಳನ್ನು ಬಳಸಲಾಗುತ್ತಿತ್ತು ಎಂದು ಹೇಳಲಾಗಿದ್ದು, ರೇವ್ ಪಾರ್ಟಿಯ ಡ್ರಗ್ಸ್ ಜಾಲದಲ್ಲಿ ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಭಾಗಿಯಾಗಿದ್ದಾರೆ.
ಡ್ರಗ್ಸ್ ಸೇವಿಸಿ ನಾವು ತಪ್ಪೇ ಮಾಡಿಲ್ಲ ಎಂಬಂತೆ ಪೊಲೀಸರ ಮುಂದೆ ನಟಿಸಿದ್ದಾರೆ. ಮ್ಯೂಸಿಕ್ ಕಂಪನಿಯೊಂದು ಈ ಪಾರ್ಟಿ ಆಯೋಜಿಸಿತ್ತು. ಪಾರ್ಟಿಯಲ್ಲಿದ್ದವರಲ್ಲಿ ಬಹುತೇಕರು ಹೊರರಾಜ್ಯದವರು ಎಂದು ತಿಳಿದು ಬಂದಿದೆ. ಕೇರಳ, ಉತ್ತರ ಪ್ರದೇಶ ಮೂಲದವರು ಭಾಗಿ ಮಾಹಿತಿ ಸಿಕ್ಕಿದ್ದು ರಾಜ್ಯದ ಕೆಲ ವಿದ್ಯಾರ್ಥಿಗಳು ಸೇರಿದಂತೆ ಕನ್ನಡದ ವಿದ್ಯಾರ್ಥಿಗಳೂ ಕೂಡ ಪಾರ್ಟಿಯಲ್ಲಿ ಭಾಗಿಯಾಗಿದ್ರು ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.