Friday, June 5, 2026
Homeಕರಾವಳಿಮಂಗಳೂರಿನ ರೌಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಪೊಲೀಸ್ ಕಮಿಷನರ್: ಅಂದ್ಹಾಗೆ ಪೊಲೀಸ್ ಆಯುಕ್ತರು ಹೇಳಿದ್ದೇನು?

ಮಂಗಳೂರಿನ ರೌಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಪೊಲೀಸ್ ಕಮಿಷನರ್: ಅಂದ್ಹಾಗೆ ಪೊಲೀಸ್ ಆಯುಕ್ತರು ಹೇಳಿದ್ದೇನು?

- Advertisement -
- Advertisement -

ಮಂಗಳೂರು: ಸುರತ್ಕಲ್ʼನಲ್ಲಿ 130 ಜನ ರೌಡಿಗಳಿಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಕ್ಲಾಸ್ ತೆಗೆದುಕೊಂಡಿದ್ದು,ಒಂದಿಷ್ಟು ರೌಡಿಗಳಿಗೆ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. ಜನವರಿ 27ರಂದು ಯುವಕರು ಪರಸ್ಪರ ಅಟ್ಯಾಕ್ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಪರೇಡ್ ನಡೆಸಲಾಗಿದ್ದು, ಒಬ್ಬೊರನ್ನಾಗಿ ವಿಚಾರಣೆ ನಡೆಸಿದ ಪೊಲೀಸ್ ಕಮಿಷನರ್ ಯಾವ್ ಕೇಸ್ ಅಂತಾ ರೌಡಿಗಳ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ.

ಈ ವೇಳೆ ಕಟಿಂಗ್, ಶೇವಿಂಗ್ ಮಾಡಿಕೊಂಡು ನೀಟಾಗಿ ಹಾಜರಾಗಲು ವಾರ್ನಿಂಗ್ ನೀಡಿದ ಕಮಿಷನರ್‌ʼಗೆ, ರೌಡಿ ಶೀಟರ್‌ ಒಬ್ಬ ದೇವರಿಗೆ ಕೂದಲು ಬಿಟ್ಟಿದ್ದೀನಿ ಅಂತಾ ಹೇಳಿದ್ದಾನೆ. ಆಗ ಕೆಟ್ಟ ಕೆಲಸ ಮಾಡಿ ಧಾರ್ಮಿಕ ಕ್ಷೇತ್ರಗಳನ್ನ ಅಪವಿತ್ರ ಮಾಡ್ತೀರಾ ಅಂತಾ ಕಮಿಷನರ್ ಶಶಿಕುಮಾರ್‌ ಚಾರ್ಜ್ ಮಾಡಿದ್ದಾರೆ.

ಇನ್ನು ನಮ್ಮದು ಗ್ಯಾಂಗ್ ವಾರ್ ಅಂತಾ ಹೇಳಿದ  ರೌಡಿಗೆ, ಇದಕ್ಕೆ ಏನ್ ದೊಡ್ಡ ಗ್ಯಾಂಗಾ ನಿಂದು. ಎಲ್ಲಾ ಗ್ಯಾಂಗ್ʼನ್ನ ಇಲ್ಲದಂಗೆ ಮಾಡ್ತಿನಿ ಇರು ಅಂತಾ ಕಮಿಷನರ್ ವಾರ್ನಿಂಗ್ ಕೊಟ್ಟರು.

- Advertisement -

Latest News

error: Content is protected !!