- Advertisement -
![]()
- Advertisement -
ಕಡಬ: ಕೇಸೊಂದರ ವಿಚಾರಣೆಗೆಂದು ಕರೆದೊಯ್ದು ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಯುವಕ ಆಸ್ಪತ್ರೆಗೆ ದಾಖಲಾದ ಘಟನೆ ಕಡಬ ತಾಲೂಕು ಎಡಮಂಗಲ ಗ್ರಾಮದಲ್ಲಿ ನಡೆದಿದೆ.ಕಡಬ ತಾಲೂಕು ಎಡಮಂಗಲ ಗ್ರಾಮದ ಮರ್ದೂರು ನಿವಾಸಿ ಶಿವರಾಮ ಎಂಬವರ ಪುತ್ರ ವಿನಯ ಎಂಬವರು ಆಸ್ಪತ್ರೆಗೆ ದಾಖಲಾದವರು.
ವಿನಯ್ ತನ್ನ ತಂದೆಗೆ ಸಂಬಂಧಿಸಿದ ಕೇಸೊಂದರ ವಿಚಾರಣೆ ನೆಪದಲ್ಲಿ ಏ. 15 ರಂದು ಮನೆಗೆ ಬಂದ ಬೆಳ್ಳಾರೆ ಪೊಲೀಸರ ತಂಡದಲ್ಲಿದ್ದ ಸಿಬ್ಬಂದಿಯೊಬ್ಬರು ನನ್ನನ್ನು ಕರೆದೊಯ್ಯುತ್ತಿದ್ದಾಗ ಅರ್ಧ ದಾರಿಯಲ್ಲಿ ಕೆನ್ನೆಗೆ ಬಾರಿಸಿ ಬೂಡಿನಿಂದ ಒದ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಬೆಳ್ಳಾರೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.ಮೇಲಾಧಿಕಾರಿಗಳಿಗೂ ಮಾಹಿತಿ ರವಾನೆಯಾಗಿದ್ದು ಸತ್ಯಾಸತ್ಯತೆ ಪರಿಶೀಲಿಸಲು ಸೂಚಿಸಿರುವುದಾಗಿ ತಿಳಿದು ಬಂದಿದೆ.
- Advertisement -


