Friday, June 26, 2026
Homeಕರಾವಳಿಪುತ್ತೂರಿನಲ್ಲಿ‌ ಬಿಜೆಪಿ‌ ನಾಯಕರ ಫೋಟೋಗಳಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣ; ಪೋಲೀಸರ ಥಳಿತದಿಂದ ಆರೋಪಿಗಳಿಗೆ ಗಂಭೀರ...

ಪುತ್ತೂರಿನಲ್ಲಿ‌ ಬಿಜೆಪಿ‌ ನಾಯಕರ ಫೋಟೋಗಳಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣ; ಪೋಲೀಸರ ಥಳಿತದಿಂದ ಆರೋಪಿಗಳಿಗೆ ಗಂಭೀರ ಗಾಯ

- Advertisement -
- Advertisement -

ಪುತ್ತೂರಿನಲ್ಲಿ ಬಿಜೆಪಿ‌ ನಾಯಕರ ಫೋಟೋಗಳಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಗೆ ಪೋಲೀಸರು ಥಳಿಸಿದ್ದು  ಆರೋಪಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಫೋಟೋಗಳು ವೈರಲ್‌ ಆಗಿವೆ.
ಅಲ್ಲದೇ ಪೊಲೀಸರ ನಡಾಗೆ ಭಾರೀ  ಆಕ್ರೋಶ ವ್ಯಕ್ತವಾಗಿದೆ.

ಪುತ್ತೂರಿನಲ್ಲಿ ಪಕ್ಷದ ಸೋಲಿನ ಬಗ್ಗೆ ಆಕ್ರೋಶಗೊಂಡು ಬಿಜೆಪಿ ಕಾರ್ಯಕರ್ತರು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಮಾಜಿ ಸಿಎಂ ಸದಾನಂದ ಗೌಡರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಶ್ರದ್ಧಾಂಜಲಿ ಕೋರಿ ಬ್ಯಾನರ್ ಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ 7 ಆರೋಪಿಗಳನ್ನು ಪೊಲೀಸರು ಬಂಧಿಸಿ ತೀವ್ರ ರೀತಿಯ ಕಿರುಕುಳ, ಚಿತ್ರಹಿಂಸೆ ಕೊಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಬೆನ್ನು, ಸೊಂಟದ ಹಿಂಭಾಗಕ್ಕೆ ಬಾಸುಂಡೆ ಬರುವ ರೀತಿ ಥಳಿಸಿದ್ದು ಪೊಲೀಸರ ಕಿರುಕುಳದಿಂದ ಕಾರ್ಯಕರ್ತರು ಎದ್ದು ನಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ವಿಷಯ ತಿಳಿದು ಅರುಣ್ ಪುತ್ತಿಲ ಕಾರ್ಯಕರ್ತರನ್ನು ಅವರ ಕೈಯಿಂದ ಬಿಡಿಸಿ ತಂದಿದ್ದಾರೆ ಎನ್ನಲಾಗಿದೆ.

ಪೊಲೀಸ್ ಠಾಣೆಯಲ್ಲಿ ಆರೋಪಿಗಳನ್ನು ಕೂಡಿಹಾಕಿ ತೀವ್ರವಾಗಿ ಥಳಿಸಲಾಗಿದೆ. ನಳಿನ್ ಕುಮಾರ್ ಆಪ್ತರು ಮತ್ತು ಪುತ್ತೂರಿನ ಬಿಜೆಪಿ ಪುಡಾರಿಗಳ ಒತ್ತಡಕ್ಕೊಳಗಾಗಿ ಪೊಲೀಸರು ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ತಮ್ಮ ಪಕ್ಷದ ಕಾರ್ಯಕರ್ತರಿಗೇ ಈ ರೀತಿ ಪೊಲೀಸರ ಮೂಲಕ ಚಿತ್ರಹಿಂಸೆ ಕೊಡಿಸಿದ್ದು ಪುತ್ತೂರಿನಲ್ಲಿ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

- Advertisement -

Latest News

error: Content is protected !!