Tuesday, June 6, 2023
Homeಕರಾವಳಿಬೆಳ್ತಂಗಡಿ ನಗರಕ್ಕೆ ನೀರು ಒದಗಿಸುವ ನದಿಯನ್ನು ಕಲುಷಿತಗೊಳಿಸಿದ ದುಷ್ಕರ್ಮಿಗಳು

ಬೆಳ್ತಂಗಡಿ ನಗರಕ್ಕೆ ನೀರು ಒದಗಿಸುವ ನದಿಯನ್ನು ಕಲುಷಿತಗೊಳಿಸಿದ ದುಷ್ಕರ್ಮಿಗಳು

- Advertisement -
- Advertisement -

ಬೆಳ್ತಂಗಡಿ: ನಗರ ಪಂಚಾಯತ್ ವ್ಯಾಪ್ತಿಯಲ್ಲಿ 11 ವಾರ್ಡ್ ಗಳಿಗೆ ನೀರು ಪೂರೈಸುತ್ತಿದ್ದ ಸೋಮಾವತಿ ನದಿ ನೀರನ್ನು ದುಷ್ಕರ್ಮಿಗಳು ಕಲುಷಿತಗೊಳಿಸಿರುವ ಅನುಮಾನ ವ್ಯಕ್ತವಾಗಿದ್ದು ಮೀನುಗಳ ಮಾರಣಹೋಮವಾಗಿವೆ.

ಬೆಳ್ತಂಗಡಿ ನಗರ ಪಂಚಾಯತ್ ಕುಡಿಯುವ ನೀರಿನ ಪಂಪುಹೌಸ್ ಬಳಿಯ ಸೋಮವತಿ ನದಿಯ ಗುಂಡಿಯಲ್ಲಿ ಸೋಮವಾರ ರಾತ್ರಿ ಕಿಡಿಗೇಡಿಗಳು ಸ್ಫೋಟಕ ಬೆರೆಸಿ ಮೀನು ಹಿಡಿಯಲು ಯತ್ನಿಸಿ ನೀರನ್ನು ಕುಲುಷಿತಗೊಳಿಸಿದ ಪರಿಣಾವಾಗಿ ಮೀನುಗಳು ಸಾವನ್ನಪ್ಪಿವೆ.

ರಾತ್ರಿ ಐದಾರು ಮಂದಿಯ ತಂಡ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದ್ದು, ಸ್ಥಳೀಯರು ನೀಡಿದ ಖಚಿತ ಮಾಹಿತಿಯನ್ವಯ ಬೆಳ್ತಂಗಡಿ ಠಾಣೆಯ ಎಸ್.ಐ. ನಂದಕುಮಾರ್ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿದಾಗ ಕಿಡಿಗೇಡಿಗಳು ಕತ್ತಲಲ್ಲಿ ಪರಾರಿಯಾದರು.

ಬಹುತೇಕ ದೊಡ್ಡ ಮೀನುಗಳು ಸತ್ತು ಹೋಗಿವೆ. ಘಟನಾ ಸ್ಥಳಕ್ಕೆ ಮುಖ್ಯಾಧಿಕಾರಿ ಸುಧಾಕರ್, ನ.ಪಂ. ಸದಸ್ಯ ಶರತ್ ಕುಮಾರ್ ಭೇಟಿ ನೀಡಿದ್ದಾರೆ. ನದಿ ಪಾತ್ರದಿಂದ ಸುಮಾರು 10 ದಿನಗಳಿಗೆ ಬಳಕೆಯಾಗುವಷ್ಟು ಇದ್ದ ನೀರು ಸಂಪೂರ್ಣ ಕಲುಷಿತಗೊಂಡಿದೆ. ಈ ಕುರಿತು ನ.ಪಂ. ಮುಖ್ಯಾಧಿಕಾರಿ ನೇತೃತ್ವದಲ್ಲಿ ತುರ್ತು ಸಭೆ ಕರೆಯಲಾಗಿದೆ.

- Advertisement -

Latest News

error: Content is protected !!