- Advertisement -
- Advertisement -
ಮಲ್ಪೆ: ಮೀನುಗಾರಿಕಾ ಬಂದರಿನಲ್ಲಿ ಸಿಗುವ ಮೀನುಗಳನ್ನು ಮಾರಿ ಪುಟ್ಟ ಗುಡಿಸಲಲ್ಲಿ ಜೀವನ ಸಾಗಿಸುತ್ತಿರುವ ಶಾರದ ಎಂಬ ಮಹಾತಾಯಿ ಮಲ್ಪೆ ವಡಬಾಂಡೇಶ್ವರ ವಾರ್ಡ್ ನ ನೆರ್ಗಿ ಯಲ್ಲಿ ಒಟ್ಟು 140 ಮನೆಗಳಿಗೆ ತಲಾ 5 ಕೆಜಿ ಯಂತೆ 700 ಕೆಜಿ ಅಕ್ಕಿ ಹಂಚಿ ಯಾವುದೇ ಪ್ರಚಾರವಿಲ್ಲದೆ ಸೇವೆಯೇ ನನ್ನ ಧರ್ಮ ಅಂತ ಮೌನವಾಗಿ ತನ್ನ ಮನೆ ಸೇರಿದ್ದಾರೆ.
ಸಹಾಯ ಮಾಡಲು ಶ್ರೀಮಂತಿಕೆ ಮುಖ್ಯವಲ್ಲ. ಹೃದಯ ಶ್ರೀಮಂತಿಕೆ ಒಂದೇ ಬೇಕಾಗಿರುವುದು ಎಂದು ನಿರೂಪಿಸಿರುವ ಶಾರದಕ್ಕ, ತನ್ನ ಕೈಯಲ್ಲಿ ಸಾಧ್ಯವಾದರೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ತನ್ನ ಪರಿಸರದ ಎಲ್ಲ ಕುಟುಂಬಕ್ಕೂ ಸಹಾಯ ಹಸ್ತ ಚಾಚುವ ದೊಡ್ಡ ಮನಸ್ಸು ಇವರಲ್ಲಿದೆ.
ಇದಷ್ಟಲ್ಲದೆ ನ್ಯಾಯಬೆಲೆ ಅಂಗಡಿಯಲ್ಲಿ ದೊರೆತ ಅಕ್ಕಿಯನ್ನೂ ಕೂಡ ತನ್ನ ಸುತ್ತಮುತ್ತಲಿನ ಕೂಲಿ ಕಾರ್ಮಿಕರಿಗೆ ಹಂಚಿ ಸೇವೆ ಪದಕ್ಕೆ ಅರ್ಥ ತಂದು ಕೊಟ್ಟಿದ್ದಾರೆ.
- Advertisement -