Sunday, May 19, 2024
Homeತಾಜಾ ಸುದ್ದಿಭಾರತೀಯ ಯೋಧರು ಅತಿಕ್ರಮಣ ಮಾಡುವ ಚೀನಾದ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ : ವಿಪಕ್ಷಗಳಿಗೆ ಪಿಎಂಒ ಸ್ಪಷ್ಟನೆ

ಭಾರತೀಯ ಯೋಧರು ಅತಿಕ್ರಮಣ ಮಾಡುವ ಚೀನಾದ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ : ವಿಪಕ್ಷಗಳಿಗೆ ಪಿಎಂಒ ಸ್ಪಷ್ಟನೆ

spot_img
- Advertisement -
- Advertisement -


ನವದೆಹಲಿ: ಕಳೆದ ಸೋಮವಾರ ನಡೆದ ಘರ್ಷಣೆಯಲ್ಲಿ ಚೀನಾ ಸೇನಾಪಡೆ ಗಡಿಭಾಗ ದಾಟಿ ಭಾರತದ ಪ್ರಾಂತ್ಯದೊಳಗೆ ಪ್ರವೇಶಿಸಿಲ್ಲ ಮತ್ತು ಮಿಲಿಟರಿ ಕೇಂದ್ರಗಳನ್ನು ವಶಪಡಿಸಿಕೊಂಡಿಲ್ಲ ಎಂದು ಪ್ರಧಾನಿ ಮೋದಿಯವರು ಸರ್ವಪಕ್ಷ ಸಭೆಯಲ್ಲಿ ನೀಡಿರುವ ಹೇಳಿಕೆ ಬೇಜವಾಬ್ದಾರಿ ಕುಚೇಷ್ಠೆಯ ವ್ಯಾಖ್ಯಾನವಾಗಿದೆ ಎಂಬ ವಿಪಕ್ಷಗಳ ಟೀಕೆಗೆ ಪ್ರಧಾನ ಮಂತ್ರಿ ಕಾರ್ಯಾಲಯ ಶನಿವಾರ ಸ್ಪಷ್ಟನೆ ನೀಡಿದೆ.
ನಿನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಮಂತ್ರಿಯವರು ಮಾಡಿರುವ ಹೇಳಿಕೆಯನ್ನು ತಿರುಚಲು ಪ್ರಯತ್ನ ಮಾಡಲಾಗುತ್ತಿದೆ. ಆ ಮೂಲಕ ಸೈನಿಕರ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪ್ರಧಾನಿಕಚೇರಿ ತಿಳಿಸಿ
“ಎಲ್‌ಎಸಿಯ ಉಲ್ಲಂಘನೆಗೆ ಸಂಬಂಧಿಸಿದಂತೆ, ಜೂನ್ 15 ರಂದು ಗಾಲ್ವಾನ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸ್ಪಷ್ಟನೆ ನೀಡಿದ ಸರ್ಕಾರ ಚೀನಾ ಸೇನೆ ಎಲ್‌ಎಸಿಗೆ ಅಡ್ಡಲಾಗಿ ರಚನೆಗಳನ್ನು ನಿರ್ಮಿಸಿ , ಅತಿಕ್ರಮಣ ಪ್ರಯತ್ನಿಸುತ್ತಿದ್ದರು, ಅಂತಹ ಕ್ರಮಗಳಿಂದ ದೂರವಿರಲು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ 16 ಬಿಹಾರ ರೆಜಿಮೆಂಟ್‌ನ ಸೈನಿಕರು ಚೀನಾದ ಕಡೆಯವರು ರಚನೆಗಳನ್ನು ನಿರ್ಮಿಸುವ ಪ್ರಯತ್ನವನ್ನು ವಿಫಲಗೊಳಿಸಿ, ಅತಿಕ್ರಮಣ ಪ್ರಯತ್ನ ವಿಫಲಗೊಳಿಸಿದರು ಎಂದು ಸ್ಪಷ್ಟನೆ ನೀಡಿದೆ.
ಚೀನಾ ಸೇನೆ ಭಾರತದ ಭೂಭಾಗವನ್ನು ಆಕ್ರಮಣ ಮಾಡಿರಲಿಲ್ಲ ಎಂದು ಪ್ರಧಾನಿ ಮೋದಿಯವರು ನೀಡಿದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

- Advertisement -
spot_img

Latest News

error: Content is protected !!