Thursday, May 16, 2024
HomeWorldರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ

spot_img
- Advertisement -
- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸೊಮವಾರ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ. ಉಭಯ ದೇಶದ ನಾಯಕರು ಸುಮಾರು 50 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಉಕ್ರೇನ್‌ನಲ್ಲಿ ಉಂಟಾಗಿರುವ ಸನ್ನಿವೇಶದ ಬಗ್ಗೆ ಮೋದಿ ಹಾಗೂ ಪುಟಿನ್ ಮಾತುಕತೆ ನಡೆಸಿದ್ದಾರೆ.

ಉಕ್ರೇನ್ ಮತ್ತು ರಷ್ಯಾ ತಂಡಗಳ ನಡುವೆ ನಡೆಯುತ್ತಿರುವ ಸಂಧಾನ ಪ್ರಯತ್ನಗಳ ಸ್ಥಿತಿಗತಿಯ ಕುರಿತು ಪ್ರಧಾನಿ ಮೋದಿ ಅವರಿಗೆ ಪುಟಿನ್ ಮಾಹಿತಿ ನೀಡಿದರು. ಈ ವೇಳೆ ಉಕ್ರೇನ್ ಹಾಗೂ ರಷ್ಯಾ ತಂಡಗಳ ನಡುವೆ ನಡೆಯುತ್ತಿರುವ ಮಾತುಕತೆಯ ಜೊತೆಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ನೇರ ಮಾತುಕತೆ ನಡೆಸುವಂತೆ’ ಪುಟಿನ್‌ ಅವರಿಗೆ ಸಲಹೆ ನೀಡಿದ್ದಾರೆ ಎಂದು ಕೇಂದ್ರದ ಮೂಲಗಳ ಹೇಳಿವೆ.

ಇನ್ನು ಸುಮಿ ಸೇರಿದಂತೆ ಉಕ್ರೇನ್ʼನ ಕೆಲವು ಭಾಗಗಳಲ್ಲಿ ಕದನ ವಿರಾಮ ಘೋಷಣೆ ಮತ್ತು ಅಲ್ಲಿ ಸಿಲುಕಿರುವ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕಾಗಿ ಮಾನವೀಯ ಕಾರಿಡಾರ್ʼಗಳ ಸ್ಥಾಪನೆಯನ್ನ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದು, ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಸಾಧ್ಯವಿರುವ ಎಲ್ಲ ಸಹಕಾರಗಳನ್ನು ನೀಡುವುದಾಗಿ ಪುಟಿನ್ ಅವರು ಭರವಸೆ ನೀಡಿದರು ಎನ್ನಲಾಗಿದೆ.

ಉಕ್ರೇನ್ ಮೇಲೆ ಫೆ. 24ರಂದು ರಷ್ಯಾ ಆಕ್ರಮಣ ಆರಂಭಿಸಿದ ಸಂದರ್ಭದಿಂದ ಉಭಯ ದೇಶಗಳ ನಾಯಕರ ನಡುವೆ ನಡೆದ ಮೂರನೇ ದೂರವಾಣಿ ಮಾತುಕತೆ ಇದಾಗಿದೆ. ರಷ್ಯಾ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಮಾತುಕತೆಗೂ ಮುನ್ನ ಇಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ಅವರೊಂದಿಗೂ ಪ್ರಧಾನಿ ಮಾತುಕತೆ ನಡೆಸಿದ್ದರು.

- Advertisement -
spot_img

Latest News

error: Content is protected !!