ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ತೆರವಿಗೆ ಇನ್ನು ಕೆಲವೇ ದಿನ ಬಾಕಿಯಿದೆ. ಏಪ್ರಿಲ್ 14ರ ನಂತ್ರ ಲಾಕ್ ಡೌನ್ ಸಂಪೂರ್ಣವಾಗಿ ತೆರವುಗೊಳ್ಳುತ್ತಾ ಎಂಬ ಪ್ರಶ್ನೆ ಎಲ್ಲರನ್ನು ಕಾಡ್ತಿದೆ. ಲಾಕ್ ಡೌನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈಗಾಗಲೇ ಮೋದಿ ತಜ್ಞರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಮೋದಿ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ್ದಾರೆ. ಜಿಲ್ಲಾಡಳಿತದ ವರದಿ ತೆಗೆದುಕೊಂಡು ಲಾಕ್ ಡೌನ್ ಬಗ್ಗೆ ಯೋಜನೆ ರೂಪಿಸುವಂತೆ ಮೋದಿ ಸೂಚನೆ ಮಾಡಿದ್ದಾರೆ. ತಜ್ಞರು ಮೋದಿಗೆ ಲಾಕ್ ಡೌನ್ ಅವಧಿಯನ್ನು 28 ದಿನಗಳವರೆಗೆ ವಿಸ್ತರಿಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಏಪ್ರಿಲ್ 14ರಂದು ಲಾಕ್ ಡೌನ್ ತೆರವಾದ್ರೂ ಎಲ್ಲವೂ ಮೊದಲಿನಂತೆ ಆಗುವುದಿಲ್ಲ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಸ್ಥಳಗಳಲ್ಲಿ ಲಾಕ್ ಡೌನ್ ಮುಂದುವರೆಯಲಿದೆ. ಲಾಕ್ ಡೌನ್ ತೆರವಾದ ಪ್ರದೇಶದಲ್ಲಿ 144 ಸೆಕ್ಷನ್ ಜಾರಿಯಲ್ಲಿರಲಿದೆ. ಮೂಲಗಳ ಪ್ರಕಾರ ವಿಮಾನ ಪ್ರಯಾಣ ಹಾಗೂ ರೈಲು ಸೇರಿದಂತೆ ಬಸ್ ಸಂಚಾರ ಏಪ್ರಿಲ್ 30ರವರೆಗೆ ಬಂದ್ ಆಗಿರಲಿದೆ. ಖಾಸಗಿ ಬಸ್ ಕೂಡ ಓಡುವುದಿಲ್ಲ.
ಲಾಕ್ ಡೌನ್ ವೇಳೆ ಕುಟುಂಬಸ್ಥರಿಂದ ಬೇರೆಯಾಗಿರುವ ಜನರಿಗೆ ಪಾಸ್ ನೀಡಿ ಮನೆ ತಲುಪಲು ಅವಕಾಶ ನೀಡುವ ಸಾಧ್ಯತೆಯಿದೆ. ಲಾಕ್ ಡೌನ್ ತೆರವಾದ್ಮೇಲೆ ಯಾವೆಲ್ಲ ಕ್ರಮಕೈಗೊಳ್ಳಬೇಕು ಎನ್ನುವ ಬಗ್ಗೆ ಮೋದಿ ಸರ್ಕಾರ ಮಾರ್ಗಸೂಚಿ ತಯಾರಿಸುತ್ತಿದೆ. ಲಾಕ್ ಡೌನ್ ಅಲ್ದೆ ಕೊರೊನಾ ನಿಯಂತ್ರಣಕ್ಕೆ ಇನ್ನೂ ಅನೇಕ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ.