Thursday, June 4, 2026
Homeಉದ್ಯಮಏರಿಕೆ ಇಳಿಕೆ ಹಾದಿಯಲ್ಲಿದ್ದ ಇಂಧನ ದರದಲ್ಲಿ ಇದೀಗ ಸ್ಥಿರತೆ

ಏರಿಕೆ ಇಳಿಕೆ ಹಾದಿಯಲ್ಲಿದ್ದ ಇಂಧನ ದರದಲ್ಲಿ ಇದೀಗ ಸ್ಥಿರತೆ

- Advertisement -
- Advertisement -

ಬೆಂಗಳೂರು : ಪೆಟ್ರೋಲ್, ಡಿಸೇಲ್ ಬೆಲೆಗೆ ಸಂಭಂದಿಸಿ ಇತ್ತೀಚಿನ ದಿನಗಳಲ್ಲಿ ಸ್ಥಿರತೆ ಕಾಣಿಸಿಕೊಂಡಿರಲಿಲ್ಲ . ಏರಿಕೆ ಇಳಿಕೆ ಹಾದಿಯಲ್ಲಿದ್ದ ಇಂಧನ ದರ ಇದೀಗ ಸ್ಥಿರತೆ ಕಂಡುಕೊಳ್ಳುವತ್ತ ಸಾಗಿದೆ. ಬುಧವಾರ ಯಾವುದೇ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಇಳಿಕೆ ಕಂಡಿಲ್ಲ. ಆದರೆ ಬೆಂಗಳೂರಿನಲ್ಲಿ ಮಾತ್ರ ಕೊ೦ಚ ಬದಲಾವಣೆ ಕಂಡಿದೆ.

ಪೆಟ್ರೋಲ್‌ ಬೆಲೆಯಲ್ಲಿ 18 ಪೈಸೆ ಇಳಿಕೆ ಯಾಗಿದೆ, ಡೀಸೆಲ್‌ ದರದಲ್ಲಿ 12 ಪೈಸೆ ಇಳಿದಿದೆ. ಇನ್ನು ಮುಂಬಯಿ, ಚೆನ್ನೈನಲ್ಲಿ ಪೆಟ್ರೋಲ್‌ ದರ 85ರ ಗಡಿ ದಾಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 84.20 ರೂ. ಆಗಿದೆ. ಡೀಸೆಲ್ ದರ 76.82 ರೂ. ರೂ ಇದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ 81.55 ರೂ. ಆಗಿದೆ ಮತ್ತು ಡೀಸೆಲ್ ದರ 72.56 ರೂ.ಆಗಿದೆ. ಮುಂಬಯಿಯಲ್ಲಿ ಪೆಟ್ರೋಲ್ ದರ 88.21 ರೂ. ಮತ್ತು ಡೀಸೆಲ್ ದರ 79.05 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್ ದರ 84.57 ರೂ. ಮತ್ತು ಡೀಸೆಲ್ ದರ 77.91 ರೂ. ಇದೆ.

- Advertisement -

Latest News

error: Content is protected !!