- Advertisement -
- Advertisement -
ಬೆಳ್ತಂಗಡಿ : ರವಿವಾರದಂದು ಮನೆಯಿಂದ ಕಾಣೆಯಾಗಿದ್ದ ವ್ಯಕ್ತಿಯೋರ್ವರು ಮರುದಿನ ಬೆಳಿಗ್ಗೆ ಮನೆಯ ಸಮೀಪದಲ್ಲಿರುವ ಗುಡ್ಡೆಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನಡ ಗ್ರಾಮದ ಪಿಲಿಕುಡೇಲು ನಿವಾಸಿ ತಿಮ್ಮಪ್ಪ ಮೂಲ್ಯ(61.ವ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.ಇವರು ಅ.24 ರಂದು ಸಂಜೆ ಮನೆಯಿಂದ ಹೊರಟವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಮನೆಯರು ಇವರಿಗಾಗಿ ಊರಿನಲ್ಲಿ ಹುಡುಕಾಟ ನಡೆಸಿದ್ದರೂ, ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಅ.25 ರಂದು ಮನೆಯ ಸಮೀಪವಿರುವ ಗುಡ್ಡೆಯಲ್ಲಿ ಹುಡುಕಾಟ ನಡೆಸಿದ ಸಂದರ್ಭ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ
- Advertisement -