Tuesday, June 9, 2026
Homeಕರಾವಳಿಉಡುಪಿವರ್ಷದ ವ್ಯಕ್ತಿ: ಎಳ್ಳಾರೆ ಶಂಕರ ನಾರಾಯಣ ನಾಯಕ್‌

ವರ್ಷದ ವ್ಯಕ್ತಿ: ಎಳ್ಳಾರೆ ಶಂಕರ ನಾರಾಯಣ ನಾಯಕ್‌

- Advertisement -
- Advertisement -

ಎಳ್ಳಾರೆ- ಮುಂಬೈ ಯಕ್ಷವೈಭವ ಮಕ್ಕಳ ಮೇಳದ ರೂವಾರಿ ಎಳ್ಳಾರೆ ಶಂಕರ ನಾರಾಯಣ ನಾಯಕ್‌ ಇವರು ಕಾರ್ಕಳ ತಾಲ್ಲೂಕು ರಾಜಾಪುರ ಸಾರಸ್ವತ ಸಂಘವು ನೀಡುವ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಡಿ. 3ರಂದು ಶಿವಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಎಣ್ಣೆಹೊಳೆ ಲಕ್ಷ್ಮೀಪುರ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ದೀಪೋತ್ಸವದಲ್ಲಿ ಗೌರವ ಸಮರ್ಪಣೆ ನಡೆಯಲಿದೆ.

ಮುಂಬೈ ಮತ್ತು ಕಾರ್ಕಳ ತಾಲ್ಲೂಕಿನ ಎಳ್ಳಾರೆಯಲ್ಲಿ ಹಲವು ವರ್ಷಗಳಿಂದ ಯಕ್ಷವೈಭವ ಮಕ್ಕಳ ಮೇಳದ ಮೂಲಕ 500ಕ್ಕೂ ಹೆಚ್ಚು ಮಕ್ಕಳಿಗೆ ಯಕ್ಷಗಾನ ಕಲಿಸಿದ್ದಾರೆ.  

- Advertisement -

Latest News

error: Content is protected !!