Wednesday, May 15, 2024
Homeಕರಾವಳಿಕಾಸರಗೋಡು ಜಿಲ್ಲೆಯ ಹೊಸ ನಿಯಮದಿಂದ ರಸ್ತೆಯಲ್ಲೇ ಬಾಕಿಯಾದ ನೂರಾರು ಪ್ರಯಾಣಿಕರು !

ಕಾಸರಗೋಡು ಜಿಲ್ಲೆಯ ಹೊಸ ನಿಯಮದಿಂದ ರಸ್ತೆಯಲ್ಲೇ ಬಾಕಿಯಾದ ನೂರಾರು ಪ್ರಯಾಣಿಕರು !

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ತಲಪಾಡಿ ಚೆಕ್ ಪೋಸ್ಟ್ ಬಳಿ ಕಾಸರಗೋಡು ಜಿಲ್ಲಾಡಳಿತ ಮಂಗಳವಾರ ಬೆಳಿಗ್ಗೆ ತಡೆಹಾಕಿದೆ.

ಉದ್ಯೋಗ ನಿಮಿತ್ತ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ನಿತ್ಯವೂ ಸಾವಿರಾರು ಮಂದಿ ಸಂಚರಿಸುತ್ತಿದ್ದರು. ಉದ್ಯೋಗ, ಶಿಕ್ಷಣದ ಕಾರಣಕ್ಕೆ ನಿತ್ಯವೂ ಎರಡೂ ಜಿಲ್ಲೆಗಳ ನಡುವೆ ಸಂಚರಿಸುವವರಿಗೆ ಉಭಯ ಜಿಲ್ಲಾಡಳಿತಗಳು ಪಾಸ್ ನೀಡಿದ್ದವು.

ಆದರೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಸರಗೋಡು ಜಿಲ್ಲೆಗೆ ಪ್ರಯಾಣಿಸುವ ಎಲ್ಲರಿಗೂ ಹೊಸ ನಿಯಮವೊಂದನ್ನು ತಂದಿರುವ ಕಾಸರಗೋಡು ಜಿಲ್ಲಾಡಳಿತ. ತಿಂಗಳಲ್ಲಿ ಒಮ್ಮೆ ಮಾತ್ರ ಒಂದು ಕಡೆಗೆ ಪ್ರಯಾಣಿಸಬೇಕು ಮತ್ತು ಕನಿಷ್ಠ 28 ದಿನಗಳ ಕಾಲ ಅಲ್ಲಿಯೇ ಇರಬೇಕು ಎಂಬ ಷರತ್ತನ್ನು ವಿಧಿಸಿದೆ.‌

ಈ ಹಿಂದೆ ನೀಡಿದ್ದ ಪಾಸ್ ಹಿಡಿದು ಮಂಗಳವಾರ ಬೆಳಿಗ್ಗೆ ತಲಪಾಡಿ ಚೆಕ್ ಪೋಸ್ಟ್ ಬಳಿ ಬಂದ ನೂರಕ್ಕೂ ಹೆಚ್ಚು ಮಂದಿಯನ್ನು ಕಾಸರಗೋಡು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಪೊಲೀಸರು ಮತ್ತು ಜನರ ನಡುವೆ ವಾಗ್ವಾದ ನಡೆಯುತ್ತಿದೆ.

ಸ್ಥಳದಲ್ಲಿ ಬಿಗು ವಾತಾವರಣ ನಿರ್ಮಾಣ ಆಗಿದೆ. ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

- Advertisement -
spot_img

Latest News

error: Content is protected !!