ಅಹಮದಾಬಾದ್ ದಲ್ಲಿ ವಿಮಾನ ಪತನವಾದಾಗ ವಿಮಾನದಲ್ಲಿ 242 ಪ್ರಯಾಣಿಕರಲ್ಲಿ 241 ಜನ ಸಜೀವ ದಹನವಾಗಿದ್ದಾರೆ. ವಿಮಾನದ ಎಕನಾಮಿ ಕ್ಲಾಸ್ ನ 11 A ಸೀಟ್ ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ರಮೇಶ್ ವಿಶ್ವಾಸ್ ಕುಮಾರ್ ಎಂಬ ಪ್ರಯಾಣಿಕ ಬಚಾವ್ ಆಗಿದ್ದಾರೆ.
ಬ್ರಿಟಿಷ್ ಪ್ರಜೆಯಾದ ಭಾರತೀಯ ಮೂಲದ ರಮೇಶ್ ವಿಶ್ವಾಸ್ ಕುಮಾರ್ ಅವರು ವಿಮಾನಕ್ಕೆ ಬೆಂಕಿ ಹತ್ತಿಕೊಳ್ಳುವುದರೊಳಗೆ ವಿಮಾನದಿಂದ ಹೊರಗೆ ಜಿಗಿದಿದ್ದಾರೆ. ಸಣ್ಣಪುಟ್ಟ ಗಾಯಗಳನ್ನು ಬಿಟ್ಟರೆ ಬಿಸ್ವಾಸ್ ಅವರಿಗೆ ಬೇರೆ ಏನೂ ತೊಂದರೆಯಾಗಿಲ್ಲ. ಅವರು ನಡೆದುಕೊಂಡೇ ದುರಂತ ಸ್ಥಳದಿಂದ ಹೊರಗೆ ಬಂದಿದ್ದಾರೆ. ಟೇಕ್ ಆಫ್ ಆದ 30 ಸೆಕೆಂಡ್‌ಗಳಲ್ಲಿ ವಿಮಾನ ಪತನಗೊಂಡಿದೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ. ನಂತರ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾರತದ 169 ಮಂದಿ ಸೇರಿದಂತೆ 53 ಬ್ರಿಟನ್ ಪ್ರಜೆಗಳು ಹಾಗೂ ಇತರರು ಸೇರಿ ಒಟ್ಟು 242 ಮಂದಿ ವಿಮಾನದಲ್ಲಿದ್ದರು ಎನ್ನಲಾಗಿದ್ದು, ಇವರಲ್ಲಿ ಭಾರತೀಯ ಮೂಲದ ಬ್ರಿಟನ್ ಪ್ರಜೆ ರಮೇಶ್ ವಿಶ್ವಾಸ್ ಕುಮಾರ್ ಪವಾಡ ಸದೃಶರಾಗಿ ಬದುಕುಳಿದಿದ್ದಾರೆ.