Monday, July 20, 2026
Homeಕರಾವಳಿವಿಟ್ಲ: ಕೆಎಸ್ ಆರ್ ಟಿಸಿ ಬಸ್ ನಿಂದ ಎಸೆಯಲ್ಪಟ್ಟು ಪ್ರಯಾಣಿಕನಿಗೆ ಗಂಭೀರ ಗಾಯ

ವಿಟ್ಲ: ಕೆಎಸ್ ಆರ್ ಟಿಸಿ ಬಸ್ ನಿಂದ ಎಸೆಯಲ್ಪಟ್ಟು ಪ್ರಯಾಣಿಕನಿಗೆ ಗಂಭೀರ ಗಾಯ

- Advertisement -
- Advertisement -

ವಿಟ್ಲ:ಕೆಎಸ್ ಅರ್ ಟಿಸಿ ಬಸ್ ನಿಂದ ಎಸೆಯಲ್ಪಟ್ಟು ಪ್ರಯಾಣಿಕನಿಗೆ ಗಂಭೀರ ಗಾಯವಾಗಿರುವ ಘಟನೆ
ವಿಟ್ಲದ ಪೆರುವಾಯಿ ಗ್ರಾಮದ ಕೆದುವಾರು ಎಂಬಲ್ಲಿ ನಡೆದಿದೆ.ಕೆದುವಾರು ನಿವಾಸಿ ಇನಾಸ್ ಡಿ ಸೋಜಾ ಗಾಯಗೊಂಡವರು.

ಇನಾಸ್‌ ಅವರು ಸೆ.15ರಂದು ವಿಟ್ಲ ಪೇಟೆಯಿಂದ ಕೆಲಸ ಮುಗಿಸಿ ವಿಟ್ಲ ಪಕಳಕುಂಜ ಕೆ ಎಸ್ ಆರ್ ಟಿ ಸಿ ಬಸ್‌ನಲ್ಲಿ ಕೆದುವಾರು ಎಂಬಲ್ಲಿಗೆ ತಲುಪುವ ವೇಳೆ ಬಸ್ ಸ್ಟಾಪ್ ನಲ್ಲಿ ಇಳಿಯಲು ಎದ್ದು ನಿಂತಿದ್ದಾರೆ. ಈ ವೇಳೆ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನು ತಿರುವು ರಸ್ತೆಯಲ್ಲಿ ಒಮ್ಮೆಲೇ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಬಸ್ಸನ್ನು ಚಲಾಯಿಸಿದ್ದಾನೆ. ಇದರಿಂದ ಬಸ್ಸಿನ ಹಿಂಬದಿಯ ಬಾಗಿಲು ಬಳಿ ನಿಂತಿದ್ದ ಇನಾಸ್ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ರಸ್ತೆಗೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ. ಇದೀಗ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!